Advertisement

King cobra: ಬೈಕ್ ನಲ್ಲಿ ಅಡಗಿದ್ದ ಬೃಹತ್ ಕಾಳಿಂಗ ಸರ್ಪ!

08:22 PM Aug 25, 2023 | Team Udayavani |

ಕಾರವಾರ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿರುವ ಘಟನೆ ಕಾರವಾರದ ಶೇಜವಾಡ ಬಳಿ ನಡೆದಿದೆ.

Advertisement

ಶೇಜವಾಡದ ಮಂಜುನಾಥ ನಾಯ್ಕ ಎಂಬುವವರು ಮನೆಯ ಅಂಗಳಲ್ಲಿ ಬೈಕ್‌‌ ನಿಲ್ಲಿಸಿಟ್ಟಿದ್ದರು.’ಈ ವೇಳೆ ಬೈಕ್ ಹಿಂಬದಿಯ ಚೈನ್ ಪಾಕೆಟ್‌ ಬಳಿ ಕಾಳಿಂಗ ಸರ್ಪ ಅಡಗಿಕೊಂಡಿತ್ತು.

ಹಾವಿನ ಇರುವಿಕೆ ತಿಳಿದು ಬಂದ ತತ್ ಕ್ಷಣ ಉರಗ ರಕ್ಷಕ ಅನಿಲ್ ಪೂಜಾರಿ ಸ್ಥಳಕ್ಕೆ‌ ಆಗಮಿಸಿ, ಬೈಕ್ ಒಳಗೆ ಇದ್ದ ಕಾಳಿಂಗ ಸರ್ಪವನ್ನ ಹಿಡಿದು ರಕ್ಷಿತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ. ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಒಯ್ದ ನಂತರ ಜನರು ನಿಟ್ಟುಸಿರು ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next