Advertisement
ಕಿಮ್ಸ್ ಆಸ್ಪತ್ರೆಯ ಪ್ರಸೂತಿ ಗೃಹ ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ತಂಡ ಕೋವಿಡ್ -19 ಒಂದನೇ ಅಲೆಯಲ್ಲಿ 130 ಹಾಗೂ ಎರಡನೇ ಅಲೆಯಲ್ಲಿ 235 ಸೇರಿ ಒಟ್ಟು 365 ಗರ್ಭಿಣಿಯರಿಗೆ ಯಶಸ್ವಿಯಾಗಿ ಸುರಕ್ಷಿತ ಹೆರಿಗೆ ಮಾಡಿದ್ದು, ಇದರ ಕಾರ್ಯಕ್ಕೆ ಕೇಂದ್ರ ಸರಕಾರ ಲಕ್ಷಾ ಪ್ರಮಾಣೀಕರಣದಲ್ಲಿ ಅತೀ ಹೆಚ್ಚಿನ ಅಂಕಗಳನ್ನು ನೀಡಿದೆ. ಸಾಮಾನ್ಯವಾಗಿ ಸುರಕ್ಷಿತ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಶೇ.70 ಸಾಧನೆ ಮಾಡಿದಂತಹ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಸರಕಾರ ಲಕ್ಷಾ ಪ್ರಮಾಣೀಕರಣ ನೀಡುತ್ತದೆ. ಆದರೆ ಕಿಮ್ಸ್ ಆಸ್ಪತ್ರೆಯ ಪ್ರಸೂತಿ ಗೃಹ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಕೊರೊನಾ ಸಂದರ್ಭದಲ್ಲೂ ಅತ್ಯುತ್ತಮ ಸೇವೆ ಮೂಲಕ ಲಕ್ಷಾ ಪ್ರಮಾಣೀಕರಣದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ. ಕಳೆದ ವರ್ಷ ರಾಜ್ಯಮಟ್ಟದ ಮಾನ್ಯತೆ ಪಡೆದಿದ್ದ ಕಿಮ್ಸ್ ಈ ಭಾರಿಗೆ ರಾಷ್ಟ್ರಮಟ್ಟದ ಕೀರ್ತಿ ಪಡೆದುಕೊಂಡಿದೆ. Advertisement
ಕಿಮ್ಸ್‌ನ ಪ್ರಸೂತಿ ವಿಭಾಗಕ್ಕೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಲಕ್ಷಾ ಅಂಕ
05:27 PM Jun 29, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.