Advertisement

ಮರ್ಡರ್ ಮಾಡುವ ರೀತಿಯ ಮನಸ್ಥಿತಿಯನ್ನು ಕೇಂದ್ರ ಸರ್ಕಾರ ಹೊಂದಿದೆ: ಕಿಮ್ಮನೆ ರತ್ನಾಕರ್

03:35 PM Apr 02, 2024 | Kavyashree |

ತೀರ್ಥಹಳ್ಳಿ: ಮರ್ಡರ್ ಮಾಡುವ ರೀತಿಯ ಮನಸ್ಥಿತಿಯನ್ನು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಹೊಂದಿದೆ. ಭ್ರಷ್ಟರು ವಾಷಿಂಗ್ ಮೆಷಿನ್ ಒಳಗೆ ಹೋದರೆ ಹೊರಗೆ ಜೈ ಶ್ರೀರಾಮ್ ಎಂದುಕೊಂಡು ಬರುತ್ತಾರೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಪರಿಶುದ್ಧ ಆಗುತ್ತಾರೆ ಎಂಬಂತೆ ವರ್ತಿಸುತ್ತಾರೆ ಎಂದು ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಮಂಗಳವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೋದಿ ಎಂದರೆ ದೇವರ ಸಮಾನ ಎಂದು ಮಾಧ್ಯಮಗಳು ತೋರಿಸುತ್ತಾರೆ, 2014 ರಲ್ಲಿ 54 ಇದ್ದ ಡಾಲರ್ ಹಣ 84 ಆಗಿದೆ. ಇದರ ಬಗ್ಗೆ ಜನರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮೋದಿ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ಇ.ಡಿ ದಾಳಿ ನಡೆಸುತ್ತಾರೆ. ಕರ್ನಾಟಕಕ್ಕೆ ಕೇಂದ್ರದಿಂದ ಏನು ಅನುಕೂಲವಾಗಿದೆ. ಬಿಎಸ್ಎನ್ ಎಲ್ ಕಥೆ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದರು.

ಮೋದಿ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ಇ.ಡಿ ದಾಳಿ ನಡೆಸುತ್ತಾರೆ. ಪತ್ರಿಕಾಗೋಷ್ಠಿ ನಡೆಸದೆ 10 ವರ್ಷ ಆಡಳಿತ ನಡೆಸಿದ ಪ್ರಧಾನಿ ಎಂದರೆ ಮೋದಿ ಮಾತ್ರ. ಕಂಗನಾ ರಾಣಾವತ್, ಅಕ್ಷಯ್ ಕುಮಾರ್ ಜೊತೆ ಸಂದರ್ಶನ ನಡೆಸಿದ್ದಾರೆ. ಇವರಿಗೆ ಅನುಕೂಲ ಮಾಡಿ ಕೊಟ್ಟವರಿಗೆ ರಾಜ್ಯಪಾಲ, ಎಂ ಪಿ ಟಿಕೆಟ್ ನೀಡಿದ್ದಾರೆ. ಮೋದಿಯವರ ಭಾಷಣ ಪ್ರಚಾರಕ್ಕೆ ಮಾತ್ರ ಸೀಮಿತ ಎಂದರು.

ಗೀತಾ ಶಿವರಾಜ್ ಕುಮಾರ್ ಈ ಬಾರಿ ಗೆಲ್ಲುತ್ತಾರೆ ಎಂಬ ನಂಬಿಕೆ ನಮಗೆ ಬಂದಿದೆ. ಕಳೆದ ಬಾರಿ ಕರ್ನಾಟಕದಿಂದ ಸಂಸದರಾಗಿ ಹೋದವರಿಂದ ಕರ್ನಾಟಕಕ್ಕೆ ಏನು ಲಾಭ ಆಗಿದೆ. ಮೋದಿ ಎದುರು ಯಾರು ಮಾತನಾಡುವುದಿಲ್ಲ. ಕನ್ನಡ ಭಾಷೆಯನ್ನು ಫ್ರಿಡ್ಜ್ ನಲ್ಲಿ ತೆಗೆದು ಇಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

Advertisement

ಹಾಗೆಯೇ ಏಪ್ರಿಲ್ 5 ಕ್ಕೆ ಗಾಜನೂರಿನಿಂದ ಸಿಂಗನಬಿದರೆ, ಮಂಡಗದ್ದೆ ತೂದುರು ಸೇರಿ ಒಟ್ಟು ಏಳು ಕಡೆ ಗೀತಾ ಶಿವರಾಜ್ ಕುಮಾರ್ ಪ್ರವಾಸ ಮಾಡಲಿದ್ದಾರೆ. ಅವರೊಂದಿಗೆ ನಾವೆಲ್ಲರೂ ಭಾಗವಹಿಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಆರ್.ಎಂ. ಮಂಜುನಾಥ್ ಗೌಡ, ಕೆಸ್ತೂರು ಮಂಜುನಾಥ್,‌ ಮುಡಬ ರಾಘವೇಂದ್ರ, ಅಮರನಾಥ ಶೆಟ್ಟಿ,ಜಿ ಎಸ್ ನಾರಾಯಣ್ ರಾವ್, ಹರ್ಷೇಂದ್ರ ಕುಮಾರ್, ಮಂಜುಳಾ ನಾಗೇಂದ್ರ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next