Advertisement
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಕುಡುಕರ ಪರ ಇದ್ದೇನೆ ಎಂದು ಹೇಳುತ್ತಾರೆ ನಾನು ಕುಡುಕರ ಪರ ಆಗಲು ಸಾಧ್ಯವಿಲ್ಲ. ಅವರಿಗೆ ಕುಡಿಯುವ ಅಭ್ಯಾಸ ಇರಬಹುದು ನಾನು ಕುಡಿಯುವುದು ಇಲ್ಲ. ತೀರ್ಥಹಳ್ಳಿಯಲ್ಲಿ ಮರಳು ಕಲ್ಲು ಎಲ್ಲ ಹೊಡಿಯುತ್ತಿದ್ದಾರೆ ಎಂದರೆ ಅದು ಬಿಜೆಪಿ ಅವರೇ. ಇವರ ಹಣೆಬರಹಕ್ಕೆ ಒಬ್ಬರಿಗೆ ಉದ್ಯೋಗ ಕೊಡಿಸಲು ಆಗುವುದಿಲ್ಲ. ಅಂತಹದರಲ್ಲಿ ಉದ್ಯೋಗ ಮಾಡಿಕೊಂಡಿರುವವನನ್ನು ಜೈಲಿಗೆ ಅಟ್ಟಲು ಪ್ರಯತ್ನಿಸುತ್ತಾರಲ್ಲ ಎಂತಹ ಮನಸ್ಥಿತಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರದೆಲ್ಲಾ ಸಂಪರ್ಕ ಇಟ್ಟುಕೊಂಡು ಇಲ್ಲಿ ಲಕ್ಷ್ಮಿ ಕಾಯಿನ್ ಹಂಚುತ್ತಾರೆ. ಜ್ಞಾನೇಂದ್ರ ಅವರು ಯಾಕೆ ಹೀಗಾದರೂ ಅಂತ ನನಗೆ ಗೊತ್ತಾಗುತ್ತಿಲ್ಲ ಎಂದರು. ಮಲ್ಲಂದೂರಿನಲ್ಲಿ ವಿದ್ಯುತ್ ರಸ್ತೆ ಇತರ ಸಮಸ್ಯೆಗಳಿಗೆ ಪ್ರತಿಭಟನೆ ಮಾಡಿದವನು ನಾನು. ಆಗ ನಾನು ಶಾಸಕ ಕೂಡ ಆಗಿರಲಿಲ್ಲ ಅವರೇ ಆರಗಾದ ಜ್ಞಾನೇಂದ್ರ ಅವರೇ ಶಾಸಕರಾಗಿದ್ದರು. ಆದರೆ ಈಗ ಏನೇ ಹೇಳಿದರೂ ನಾನೇ ಮಾಡಿದ್ದು ಎಂದು ಹೇಳುತ್ತಾರೆ ಅದಕ್ಕೆಲ್ಲ ಬೇರೆ ರೀತಿಯಲ್ಲೇ ವಿಶೇಷವಾದ ಪತ್ರಿಕಾಗೋಷ್ಠಿಯನ್ನು ಕರೆದು ಉತ್ತರ ಕೊಡುತ್ತೇನೆ ಎಂದರು.
Related Articles
Advertisement
ಪ್ರಜಾಧ್ವನಿ ಕಾರ್ಯಕ್ರಮ ಪಟ್ಟಣ ಪಂಚಾಯತ್ ಆವರಣದಲ್ಲಿ ನಡೆಯಲಿದೆ. ಹಾಗೂ ಯೂತ್ ಕಾಂಗ್ರೆಸ್ ನಿಂದ ಬೆಚ್ಚುವಳ್ಳಿಯಿಂದ ತೀರ್ಥಹಳ್ಳಿಯ ವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಕುಶಾವತಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣ ಪಂಚಾಯತ್ ಆವರಣಕ್ಕೆ ಕರೆತರಲಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೇಳೂರು ಮಿತ್ರ, ವಿಶ್ವನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಹರ್ಷೇಂದ್ರ ಕುಮಾರ್, ಪುಟ್ಲೋಡು ರಾಘವೇಂದ್ರ, ಪೂರ್ಣೇಶ್ ಕಳಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಪದವಿ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ ಖಂಡನೀಯ