ಶಿವಮೊಗ್ಗ : ಈ ಭಾರಿ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬಾರದು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ ಅವರು ಇದೊಂದು ಮುಂದಿನ 40 ರಿಂದ 50 ವರ್ಷದ ಜನಾಂಗವನ್ನು ರೂಪಿಸುವಂತಹ ಮಹತ್ವದ ವಿಷಯವಾಗಿದ್ದು ಇಷ್ಟೊಂದು ಮಹತ್ವದ ನೀತಿ ಸಂಸತ್, ದೇಶದ ಯಾವುದೇ ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಚರ್ಚೆಯೇ ಆಗಿಲ್ಲ. ಅಲ್ಲದೆ ಟೆಂಡರ್ ಕರೆದು ಮುಚ್ಚಿದ ಲಕೋಟೆಯಲ್ಲಿಟ್ಟು ಪ್ರಕಟಿಸಿದಂತೆ ಎನ್ಇಪಿ ಜಾರಿಗೆ ಬಂದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ವರ್ಷ ಎನ್ಇಪಿ ಜಾರಿಯಾಗಬಾರದು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು ದೇಶದ 130 ಕೋಟಿ ಜನರ ಭವಿಷ್ಯದ ಪ್ರಶ್ನೆಯಾಗಿದೆ. ದೇಶದ ಬಹು ಸಂಸ್ಕ್ರತಿಯನ್ನು ಗಮನದಲ್ಲಿಟ್ಟುಕೊಂಡು ನೀತಿ ಜಾರಿಗೊಳಿಸಬೇಕು. ಇದು ಶಿಕ್ಷಣ ಕ್ಷೇತ್ರದ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಈ ಹಿಂದೆ ನೋಟು ಜಿಎಸ್ಟಿ, ರೈಲ್ವೆ, ಅಮಾನ್ಯೀಕರಣ, ಟೆಲಿಕಾಂ ವಿಷಯದಲ್ಲಿ ತೆಗೆದುಕೊಂಡಿದ್ದರು. ಎನ್ಇಪಿ ವಿಷಯದಲ್ಲೂ ಪ್ರಧಾನಿ ಮೋದಿ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ಶಿಕ್ಷಕರ ಸಂಘಟನೆ, ಶಿಕ್ಷಣ ತಜ್ಞರೊಂದಿಗೆ ಅವರು ಚರ್ಚೆಯೇ ನಡೆಸಿಲ್ಲ. 3 ರಿಂದ 18ನೇ ವರ್ಷದ ವರೆಗಿನ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದ ಅವರು ಎನ್ಇಪಿ ಜಾರಿಯಿಂದ ಬಿಎಡ್ ಕಾಲೇಜುಗಳು ಮುಚ್ಚಿ, ಅಂಗನವಾಡಿ ಕಾರ್ಯಕರ್ತರು ನಿರುದ್ಯೋಗಿಗಳಾಗಲಿದ್ದಾರೆ. ಈ ನೀತಿಯಿಂದ ಬಡ ಮಕ್ಕಳು, ವಿಕಲಚೇತನರು, ಶಾಲೆ ಬಿಟ್ಟವರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.
ಇದನ್ನೂ ಓದಿ :ವಾಜಪೇಯಿಯವರೂ ಎತ್ತಿನ ಗಾಡಿಯಲ್ಲಿ ಬಂದಿದ್ದರು, ನಾವು ಬಂದರೆ ತಪ್ಪೇಕೆ?: ಸಿದ್ದರಾಮಯ್ಯ
ಹಾಲಿ ಇರುವ ಶಿಕ್ಷಣ ನೀತಿಯಲ್ಲಿ ಇದಕ್ಕೆ ಅವಕಾಶ ಇದೆ. ಆದರೆ ನೂತನ ಎನ್ಇಪಿಯಲ್ಲಿ ಇದರ ಬಗ್ಗೆ ಚಕಾರವಿಲ್ಲ ಪ್ರಜಾಸತ್ತಾತ್ಮಕ ದೇಶದಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ.ಹಾಗಾಗಿ ಈ ರೀತಿಯ ಅವೈಜ್ಞಾನಿಕ ನೀತಿಗಳು ಜಾರಿಗೊಳ್ಳುತ್ತಿದೆ ಎಂದು ಹೇಳಿದ್ದಾರೆ.