ಹೊಸನಗರ: ತಾಲೂಕಿನ ಮೂಡುಗೊಪ್ಪ ನಗರ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಕಾಮಗಾರಿಗೆ ಮರು
ಶಂಕುಸ್ಥಾಪನೆ ಮಾಡುವುದನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಶನಿವಾರ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ವತಯಿಂದ ಮೂಡುಗೊಪ್ಪ ನಗರ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ರೂ.12 ಲಕ್ಷ ವೆಚ್ಚದ 4 ಅಂಬೇಡ್ಕರ್ ಭವನ ಮಂಜೂರು ಮಾಡಿಸಿ, ಶಂಕುಸ್ಥಾಪನೆ ಮಾಡಲು ಹೊರಟಿರುವುದು ಅತ್ಯಂತ ದುರಷ್ಟಕರ ಸಂಗತಿ ಎಂದು ಆರೋಪಿಸಿದರು.
ಒಟ್ಟು ನಗರ ಹಾಗೂ ಹುಂಚಾ ಹೋಬಳಿಯಲ್ಲಿ ರೂ.238 ಕೋಟಿ ವೆಚ್ಚದ 18 ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನ ಮಂಜೂರು ಮಾಡಿದ್ದೇನೆ. ಇದರ ಕಾಮಗಾರಿಯ ಏಜೆನ್ಸಿ ಸಹ ನಿಗದಿಯಾಗಿ, ಆರಂಭಿಕ ಹಂತದಲ್ಲಿದೆ. ಈಗ ಅವರು ಮರಳಿ ಶಂಕುಸ್ಥಾಪನೆಗೆ ಹೊರಟರುವುದು ರಾಜಕೀಯ ದುರುದ್ದೇಶ ಆಗಿದೆ ಎಂದು ದೂರಿದರು.
ಮಂಜಾಗ್ರತಾ ಕ್ರಮವಾಗಿ ಶಂಕುಸ್ಥಾಪನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ರಾಜಾರಾಮ್, ಕರುಣಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಮ್ರಪಾಲಿ ಸುರೇಶ, ಮಹೇಶ, ರಮೇಶ, ಚಂದ್ರಶೇಖರ ಉಡುಪ, ದುಬಾರ ತಟ್ಟಿ ಸತೀಶ ಮತ್ತಿತರರು ಇದ್ದರು.