Advertisement
ಮೂಡಬಿದಿರೆಯ ಎಡಪದವು ನಿವಾಸಿ ಪುರುಷೋತ್ತಮ ಅವರ ಪತ್ನಿ ಪುಷ್ಪಾವತಿ (27) ಮೃತ ಪಟ್ಟವರು. ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾ.ಪಂ.ನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಪುಷ್ಪಾವತಿ ಅವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹವಾಗಿತ್ತು. ತುಂಬು ಗರ್ಭಿಣಿಯಾಗಿದ್ದ ಅವರಿಗೆ ವಾರದ ಹಿಂದೆಯಷ್ಟೇ ಸೀಮಂತ ನಡೆದಿತ್ತು. ಬಳಿಕ ತೀವ್ರ ಜ್ವರ ಕಾಣಿಸಿ ಕೊಂಡಿದ್ದು, ಬದ್ಯಾರು ಖಾಸಗಿ ಆಸ್ಪತ್ರೆ ಯಲ್ಲಿ ರಕ್ತಪರೀಕ್ಷೆ ಮಾಡಿಸಿದಾಗ ಎಚ್1ಎನ್1 ಪತ್ತೆಯಾಯಿತು. ಜು. 17ರಂದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಗರ್ಭದಿಂದ ಮಗುವನ್ನು ಹೊರತೆಗೆಯದೇ ಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ ಹಿನ್ನೆಲೆ ಯಲ್ಲಿ ಜು. 21ರಂದು ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಯಶಸ್ವಿಯಾಗಿ ಹೊರತೆಗೆದು ತಾಯಿ ಮಗು ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪುಷ್ಪಾವತಿ ಅವರು ಜು. 30ರಂದು ಸಂಜೆ 4ರ ಸುಮಾರಿಗೆ ಕೊನೆಯುಸಿರೆಳೆದರು.
ಪುಷ್ಪಾವತಿ ತುಂಬು ಗರ್ಭಿಣಿಯಾಗಿದ್ದ ಕಾರಣ ಎಚ್1ಎನ್1 ದೃಢಪಟ್ಟಿದ್ದರೂ ತತ್‌ಕ್ಷಣಕ್ಕೆ ತುರ್ತು ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾ ಲಾಗಿತ್ತು. ತಾಯಿಯಷ್ಟೇ ಮಗು ವಿನ ಆರೋಗ್ಯ ಕೂಡ ಮುಖ್ಯವಾಗಿತ್ತು. ಈ ಕಾರಣಕ್ಕೆ ವೈದ್ಯರು ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ಬಳಿಕವಷ್ಟೇ ಹೆಚ್ಚಿನ ಚಿಕಿತ್ಸೆ ನೀಡಲು ನಿರ್ಧ ರಿಸಿದ್ದರು. ಆದರೆ ಒಂದು ಕಡೆ ಶಸ್ತ್ರ ಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆದ ಕಾರಣ ಪುಷ್ಪಾವತಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿತ್ತು. ಎಚ್1 ಎನ್1 ಸೋಂಕು ಕೂಡ ಆ ವೇಳೆಗೆ ತೀವ್ರ ಸ್ವರೂಪ ಪಡೆದು ಕೊಂಡಿತ್ತು. ಮಗುವಿನ ಜತೆ ತಾಯಿ ಯನ್ನು ಬದುಕುಳಿಸಲು ವೈದ್ಯರು ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದರು. ಆದರೆ 13 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪುಷ್ಪಾವತಿ ಆರೋಗ್ಯ ರವಿವಾರ ಮತ್ತಷ್ಟು ವಿಷಮ ಸ್ಥಿತಿ ತಲುಪಿತ್ತು. ರವಿವಾರ ಸಂಜೆ 4ರ ಸುಮಾರಿಗೆ ಅರೆಪ್ರಜ್ಞಾವಸ್ಥೆಗೆ ಜಾರಿದ ಅವರು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.
Related Articles
Advertisement
ಹೆತ್ತಕರುಳು ದೂರವಾಯಿತುವೆನಾÉಕ್ ಆಸ್ಪತ್ರೆಯ ಮೂಲಗಳ ಪ್ರಕಾರ ಜು. 21ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪುಷ್ಪಾವತಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗು ವನ್ನು ಹೊರತೆಗೆಯಲಾಗಿತ್ತು. ಆನಂತರ ಅಲ್ಲಿಂದ ಸುಮಾರು ಒಂದೂವರೆ ಗಂಟೆಯಲ್ಲಿ ಮಗುವನ್ನು ವೆನಾÉಕ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಕಳುಹಿಸಿಕೊಡಲಾಯಿತು. ಹುಟ್ಟುವಾಗ 1.720 ಗ್ರಾಂ ತೂಕ ಹೊಂದಿದ್ದ ಮಗುವಿನ ಆರೋಗ್ಯ ಸದ್ಯ ಸ್ಥಿರವಾಗಿದೆ. ಮಗುವನ್ನು ಇಂಕ್ಯುಬೇಟರ್‌ನಲ್ಲಿ ಇಡಲಾಗಿದ್ದು, ಟ್ಯೂಬ್ ಮುಖಾಂತರ ಪೌಡರ್ ಹಾಲನ್ನು ಆಹಾರವಾಗಿ ನೀಡಲಾಗುತ್ತಿದೆ. ಅವಧಿಪೂರ್ವ ಜನಿಸಿದ ಮಗುವಾಗಿರುವ ಕಾರಣ ಅದರ ಆರೋಗ್ಯದ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ. ಕಡುಬಡತನದ ಕುಟುಂಬ
ವೇಣೂರು ನಿವಾಸಿ ಗಣೇಶ ಸಪಲ್ಯ ಹಾಗೂ ಸುಂದರಿ ದಂಪತಿಯ ಐವರು ಪುತ್ರಿಯರಲ್ಲಿ ಪುಷ್ಪಾವತಿ ಕೊನೆಯವರು. ಓರ್ವ ಸಹೋದರ ಇದ್ದಾರೆ. ಪತಿ ಮನೆಯಲ್ಲಿಯೂ ಕಡು ಬಡತನ ಇರುವ ಕಾರಣ ಪುಷ್ಪಾವತಿ ಚಿಕಿತ್ಸೆಗೆ ಕುಟುಂಬ ವರ್ಗ ತೀವ್ರ ಹೆಣಗಾಟ ನಡೆಸಿತ್ತು. ಈ ನಡುವೆ ಪುಷ್ಪಾವತಿ ಚಿಕಿತ್ಸೆ ನೆರವಿಗೆ ಧಾವಿಸಿದ ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘದ ಸದಸ್ಯರು ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ನೇತೃತ್ವದಲ್ಲಿ ಸುಮಾರು 2 ಲಕ್ಷ ರೂ. ಸಂಗ್ರಹಿಸಿ ಹಸ್ತಾಂತರಿಸಿ ದ್ದರು. ಕಾರ್ಕಳ ತಾಲೂಕು ಶಾಖೆಯಿಂದ ಸಂಘದ ಕಾರ್ಯದರ್ಶಿ ಪದ್ಮನಾಭ ಆರ್. ಕುಲಾಲ್ ಮುದ್ರಾಡಿ ನೇತೃತ್ವದಲ್ಲಿ 45,050 ರೂ. ಸಂಗ್ರಹಿಸಿ ಪುಷ್ಪಾವತಿ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಅಷ್ಟರಲ್ಲಾಗಲೇ ಪುಷ್ಪಾವತಿ ವಿಧಿಯಾಟಕ್ಕೆ ಬಲಿಯಾದರು.