Advertisement
ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳು ವಾರದಿಂದ ನಡೆಸುತ್ತಿದ್ದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಸುಮಾರು 9 ಕೆಜಿಯಷ್ಟು ಫೆಂಟನೈಲ್ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಮಾಣದ ಫೆಂಟನೈಲ್‌ನಿಂದ ಸುಮಾರು 40ರಿಂದ 50 ಲಕ್ಷ ಜನರನ್ನು ಕೊಲ್ಲಬಹುದಾಗಿದ್ದು, ಓರ್ವ ಮನುಷ್ಯನನ್ನು ಕೊಲ್ಲಲು ಕೇವಲ 2 ಮಿ.ಗ್ರಾಂ ಸಾಕು ಎಂದು ಹೇಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಕರಣ ಪತ್ತೆಯಾಗಿದೆ.
ಇಂದೋರ್‌ನ ಸ್ಥಳೀಯ ಉದ್ಯಮಿ ಮತ್ತು ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ. ಪದವೀಧರರೊಬ್ಬರ ಪಾಲುದಾರಿಕೆಯಲ್ಲಿ ಈ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈ ಪಿಎಚ್.ಡಿ ಪದವೀಧರ ಅಮೆರಿಕ ವಿರೋಧಿ ನಿಲುವು ಹೊಂದಿದವನಾ ಗಿದ್ದು, ಈತನನ್ನು ಇತ್ತೀಚೆಗೆ ದಿಲ್ಲಿಯಲ್ಲಿ ಬಂಧಿಸಲಾಗಿದೆ. ಈತನ ಜತೆಗೆ ಮೆಕ್ಸಿಕೋದ ನಾಗರಿಕನೊಬ್ಬನನ್ನೂ ಬಂಧಿಸಲಾಗಿದೆ.
Related Articles
ಇದು ಮಾದಕ ವ್ಯಸನಿಗಳ ಅಚ್ಚುಮೆಚ್ಚು. ಹಾಗಾಗಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಚೀನದಿಂದ ಮೆಕ್ಸಿಕೋ, ಕೆನಡಾ ಮಾರ್ಗವಾಗಿ ಅಮೆರಿಕಕ್ಕೆ ಇದು ಕಳ್ಳಸಾಗಣೆಯಾಗುತ್ತದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೆ.ಜಿ. ಫೆಂಟನೈಲ್‌ಗೆ 6 ಲಕ್ಷ ರೂ. ಬೆಲೆಯಿದೆ. ಆದರೆ ಕಾಳದಂಧೆಯಲ್ಲಿ ಇದರ ಬೆಲೆ ಕೆ.ಜಿ.ಗೆ ಅಂದಾಜು 12 ಕೋಟಿ ರೂ.ಗಳು.
Advertisement
ಏನಿದು ಫೆಂಟನೈಲ್?– ಫೆಂಟನೈಲ್ ಎಂಬುದು ಅಫೀಮು ಮಾದರಿಯ ಡ್ರಗ್.
– ಕೇವಲ ವಾಸನೆ ತೆಗೆದುಕೊಂಡರೂ ಸಾಕು ಮನುಷ್ಯ ಉಳಿಯು ವುದು ಅನುಮಾನ.
– ಚರ್ಮದ ರಂಧ್ರಗಳ ಮೂಲಕವೂ ಇದು ತ್ವರಿತ ವಾಗಿ ದೇಹವನ್ನು ವ್ಯಾಪಿಸಿ ಕೊಳ್ಳಬಲ್ಲದು.
– ಹೆರಾಯ್ನಗಿಂತ 50 ಪಟ್ಟು ಹಾಗೂ ಮಾಫೈìನ್‌ಗಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿ.
– ಇದನ್ನು ಅತ್ಯಲ್ಪ ಪ್ರಮಾಣದಲ್ಲಿ ಅರಿವಳಿಕೆ , ನೋವು ಶಮನ ಔಷಧಗಳಲ್ಲಿ ಬಳಸಲಾಗುತ್ತದೆ. – ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೆ.ಜಿ. ಫೆಂಟನೈಲ್‌ಗೆ 6 ಲಕ್ಷ ರೂ. ಬೆಲೆ
– 2016ರಲ್ಲಿ ಇದರ ಓವರ್ ಡೋಸ್‌ನಿಂದಾಗಿ 20,000ಕ್ಕಿಂತ ಹೆಚ್ಚು ಜನರು ಸಾವಿಗೀಡಾಗಿದ್ದರು.