Advertisement

ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿಕೆಶಿ

09:29 AM Oct 25, 2017 | |

ದಾಖಲೆ ಇದ್ದರೆ ಬಿಎಸ್‌ವೈ ಸದನ ಸಮಿತಿ ಸಭೆಗೆ ಕೊಡಲಿ ಬೆಂಗಳೂರು: “ಕಲ್ಲಿದ್ದಲು ಖರೀದಿಗಾಗಿ ರಾಜ್ಯ ಸರ್ಕಾರ ಕಾನೂನು ಮೀರಿ ನಡೆದುಕೊಂಡಿದ್ದರೆ ನನ್ನನ್ನು ಗಲ್ಲಿಗೇರಿಸಲಿ’ ಎಂದು ಇಂಧನ ಸಚಿವ ಡಿ. ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಖಾಸಗಿ ಕಂಪನಿ ಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ಕೋಲ್‌ ಬ್ಲಾಕ್‌ ಮಾಡುವ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ನಡೆದಿದ್ದು, ನವೆಂಬರ್‌ನಲ್ಲಿ ತೀರ್ಪು ಬರುವ ಸಾಧ್ಯತೆ ಇದೆ’ ಎಂದು ಹೇಳಿದರು. ಹಗರಣದ ಬಗ್ಗೆ ಸೂಕ್ತ ದಾಖಲೆ ಇದ್ದರೆ ಯಡಿಯೂರಪ್ಪ ಅ.30ರಂದು ನಡೆಯುವ ಸದನ ಸಮಿತಿ ಸಭೆಗೆ ತಂದು ಕೊಡಲಿ ಎಂದು ಶಿವಕುಮಾರ್‌ ಸವಾಲೆಸೆದರು. ಅ.30ರ ಸಭೆಗೆ ಯಾರೇ ಅಸಹಕಾರ ತೋರಿದರೂ, ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವರದಿ ಮಂಡನೆ ಮಾಡುವುದಾಗಿ ಶಿವಕುಮಾರ್‌ ಹೇಳಿದರು.

ಅ.28 ಕ್ಕೆ ಪವರ್‌ ಅವಾರ್ಡ್‌: ಇಂಧನ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ರುವ ಹಾಗೂ ಇಂಧನ ಇಲಾಖೆಗೆ ಪೂರಕ ವಾಗಿ ಕೆಲಸ ಮಾಡಿರುವ 7 ವಿಭಾಗಗಳ (ಖಾಸಗಿ ಕಂಪನಿ ಮತ್ತು ವ್ಯಕ್ತಿ) 174 ಜನರಿಗೆ ಅ.28ರಂದು ಪವರ್‌ ಅವಾರ್ಡ್‌
ನೀಡಲಾಗುವುದು ಎಂದು ಹೇಳಿದರು. 

ಸದನ ಸಮಿತಿ ವರದಿ ಬಳಿಕ ಮುಂದಿನತೀರ್ಮಾನ: ಸಿದ್ದು
ಬೆಂಗಳೂರು:
ಇಂಧನ ಇಲಾಖೆಯಲ್ಲಿ ನಡೆದ ಹಗರಣದ ಕುರಿತು ಡಿ.ಕೆ.ಶಿವಕುಮಾರ್‌ ನೇತೃತ್ವದ ಸದನ ಸಮಿತಿ ವರದಿ ನೀಡಿದ ತಕ್ಷಣ ಯಾವ ಸಂಸ್ಥೆಗೆ ತನಿಖೆಗೆ ನೀಡಬೇಕೆಂಬುದನ್ನು ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಇದೆ. ಆಗ ಆಗಿರುವ ಅವ್ಯವಹಾರಕ್ಕೆ ಮಂತ್ರಿಯೇ ಜವಾಬ್ದಾರಿಯಾಗಿರುತ್ತಾರೆ. ಈಗ ಶೋಭಾ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಐಟಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಬಿಎಸ್‌ವೈ , ಶೋಭಾ, ಶೆಟ್ಟರ್‌ ಅವರ ಮನೆಗಳ ಮೇಲೆ ಏಕೆ ಐಟಿ ದಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next