ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದು ಅಸ್ವಾಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ
ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬೇಗೂರಿನ ಅಕ್ಷಯನಗರ ನಿವಾಸಿ ರಾಜಕುಮಾರ್(25) ಹಾಗೂ ಹುಳಿಮಾವು ಕೆಂಪಮ್ಮ ಲೇಔಟ್‌ನ ದೀಪಾಲಿ(31) ಬಂಧಿತರು. ಆರೋಪಿಗಳು ಜ.8ರಂದು ಪತಿ ಧರ್ಮರಾಜ್ ಶಿಂಧೆ(35)ಯನ್ನು ಕೊಲೆಗೈದಿದ್ದರು.
ರಾಜಕುಮಾರ ಹಾಗೂ ದೀಪಾಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಕಳೆದ 6 ತಿಂಗಳಿಂದ ಅಕ್ರಮ ಸಂಬಂಧ ಹೊಂದಿ ದ್ದರು. ಜ.8ರಂದು ಪ್ರಿಯಕರನ ಜತೆ ಸಲ್ಲಾಪದಲ್ಲಿ ತೊಡಗಿದ್ದನ್ನು ಕಂಡ ಪತಿ ಧರ್ಮರಾಜ್ ಇಬ್ಬರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಪತ್ನಿ ಹಾಗೂ ಪ್ರಿಯಕರ ಕತ್ತು ಹಿಸುಕಿ ಕೊಲೆಗೈದು, ಅಸ್ವಾಭಾವಿಕ ಸಾವು ಎಂದು ಬಿಂಬಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯೆಂದು ಗೊತ್ತಾಗಿ ದೀಪಾಲಿಯನ್ನು ವಿಚಾರಣೆ ನಡೆಸಿದ್ದರು.
ಮಹೇಶ್ ಶಿಂಧೆ 15 ವರ್ಷಗಳ ಹಿಂದೆ ದೀಪಾಲಿಯನ್ನು ವಿವಾಹವಾಗಿದ್ದು, ಕೆಂಪಮ್ಮ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಮಹೇಶ್ ಆಟೋ ಚಾಲಕನಾಗಿದ್ದು ದೀಪಾಲಿ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದಳು. ಇದೇ ವೇಳೆ ತನ್ನ ಸಹದ್ಯೋಗಿ ರಾಜಕುಮಾರ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು.
ಕೆಲಸದಿಂದ ಬರುವಾಗ ದೀಪಾಲಿಯೊಂದಿಗೆ ಬರುತ್ತಿದ್ದ ಪ್ರಿಯಕರ, ಆಕೆ ಪತಿ ಬರುವ ವೇಳೆಗೆ ಮನೆ ಖಾಲಿ ಮಾಡುತ್ತಿದ್ದ. ಜ.8ರಂದು ಮಹೇಶ್ ಶಿಂಧೆ ಆಟೋ ಬಾಡಿಗೆಗೆ ಹೋಗಿದ್ದು, ಪತಿ ತಡವಾಗಿ ಬರುತ್ತಾನೆ ಎಂದು ಭಾವಿಸಿದ ಪತ್ನಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ, ಮಹೇಶ್ ಬೇಗನೆ ಬಂದಿದ್ದಾನೆ. ಪತಿ ಆಗಮಿಸುತ್ತಿದ್ದಂತೆ ಪತ್ನಿ ದೀಪಾಲಿ ಮಂಚದ ಕೆಳಗೆ ಪ್ರಿಯಕರನನ್ನು ಬಚ್ಚಿಟ್ಟಿದ್ದಾಳೆ. ಅನುಮಾನ ಗೊಂಡ ಮಹೇಶ್, ಮನೆಯಲ್ಲೇ ಹುಡುಕಾಟ ನಡೆಸಿದ್ದಾನೆ. ಪತ್ತೆಯಾದ ರಾಜಕುಮಾರ್ ಮತ್ತು ಪತ್ನಿಯ
ವಿರುದ್ಧ ಕೋಪಗೊಂಡು ಹಲ್ಲೆಗೆ ಯತ್ನಿಸಿದ್ದಾನೆ.
ಬಾರ್‌ನಿಂದ ಬಾಟಲಿ ತಂದ್ರು ತಮ್ಮ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದರಿತ ದೀಪಾಲಿ, ಪ್ರಿಯಕರನಿಗೆ ಧೈರ್ಯ ತುಂಬಿ, ಮಹೇಶ್ ಕೊಲೆಗೆ ಒಪ್ಪಿಸಿದ್ದಳು. ನಂತರ ಸಂಚು ರೂಪಿಸಿ ಇಬ್ಬರೂ ಸೇರಿ ಮಹೇಶ್‌ನ ಕತ್ತು ಹಿಸುಕಿ ಹತ್ಯೆಗೈದಿದ್ದರು. ಮೃತ ಮಹೇಶ್‌ನನ್ನು ಮಂಚದ ಮೇಲೆ ಮಲಗಿಸಿ ಬಾರ್‌ಗೆ ತೆರಳಿ ಮದ್ಯದ ಬಾಟಲಿ ತಂದು ಮೃತ ದೇಹದ ಪಕ್ಕದಲ್ಲಿ ಇಟ್ಟಿದ್ದರು. ಪಾಠಕ್ಕೆ ಹೋಗಿದ್ದ ಮಕ್ಕಳು ಮನೆಗೆ ಬಂದು ಅಪ್ಪನನ್ನು ಎಚ್ಚರಿಸಲು ಹೋದಾಗ ದೀಪಾಲಿ, “ಬೇಡ ಅಪ್ಪನಿಗೆ ಅನಾರೋಗ್ಯವಾಗಿದೆ ಎಚ್ಚರಿಸಬೇಡಿ’ ಎಂದು ತಡೆದಿದ್ದಳು. ಕೆಲ ಹೊತ್ತಿನ ಬಳಿಕ ಸ್ಥಳೀಯರು ಹಾಗೂ ಪತಿಯ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡ ದೀಪಾಲಿ, ಆತಂಕದಿಂದಲೇ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದಳು. ವೈದ್ಯರು ಮೃತವಾಗಿರು ವುದನ್ನು ದೃಢಪಡಿಸಿದ್ದರು. ಬಳಿಕ ವಿಚಾರಣೆಯಿಂದ ಸತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.