Advertisement
ಈ ಕಾಯಿಲೆಯಲ್ಲಿ ಬೇರೆ ಬೇರೆ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಅಂದರೆ ಸಾಮಾನ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮೂತ್ರವಿಸರ್ಜನೆ ಆಗುವುದು, ವಾಕರಿಕೆ, ವಾಂತಿ, ಹಸಿವು ಕಡಿಮೆ ಆಗುವುದು, ಕಾಲು ಅಥವಾ ದೇಹದ ಇತರ ಭಾಗಗಳು ಊದಿಕೊಳ್ಳುವುದು, ಉಸಿರಾಡಲು ಕಷ್ಟವಾಗುವುದು ಇತ್ಯಾದಿ.
Related Articles
Advertisement
ಚಯಾಪಚಯ ಹಂತದಲ್ಲಿರುವ ಮೂತ್ರಪಿಂಡದ ತೀವ್ರ ಹಾನಿಯು ಇದ್ದಾಗ ರೋಗಿಯು ಹೆಚ್ಚಾಗಿ ಬಹು ಅಂಗಾಂಗಗಳ ವೈಫಲ್ಯಕ್ಕೆ ಒಳಗಾಗುತ್ತಾನೆ. ಪ್ರೋಟೀನ್ ಕೊರತೆಯಿಂದಾಗಿ, ಕಾಯಿಲೆಯು ನಿಧಾನವಾಗಿ ಗುಣವಾಗುವುದರಿಂದ ಮತ್ತು ಕಾಯಿಲೆಯ ತೊಡಕುಗಳಿಂದಾಗಿ ರೋಗಿಯು ಬಹಳ ಸಮಯ ಆಸ್ಪತ್ರೆಯಲ್ಲಿಯೇ ಇರಬೇಕಾಗುವುದು. ಪೋಷಕಾಂಶಗಳ ಸ್ಕ್ರೀನಿಂಗ್ ಅನ್ನು ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಮಾಡುತ್ತಾರೆ, ವಿಶೇಷ ಆರೈಕೆಯ ಶಿಫಾರಸುಗಳು ಮತ್ತು ಮೂತ್ರಪಿಂಡದ ರೋಗಲಕ್ಷಣಗಳಿಗೆ ನೀಡುವ ಆಹಾರ ಕ್ರಮಗಳಿಗೆ ಅನುಸಾರವಾಗಿ ರೋಗಿಗಳಿಗೆ ವಿಶೇಷ ಆಹಾರ ಕ್ರಮಗಳನ್ನು ರೂಪಿಸಬೇಕಾಗುತ್ತದೆ.
ಪೋಷಕಾಂಶಗಳನ್ನು ಒದಗಿಸುವ ದೃಷ್ಟಿಯಿಂದ ಮೂತ್ರಪಿಂಡಗಳು ತೀವ್ರ ಹಾನಿಗೊಳಗಾಗಿರುವ ರೋಗಿಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು:
1.ಚಯಾಪಚಯ ಹಂತದಲ್ಲಿ ಇಲ್ಲದ ಮೂತ್ರಪಿಂಡದ ತೀವ್ರ ಹಾನಿ
(AKI in non catabolic stage)
2.ಚಯಾಪಚಯ ಹಂತದಲ್ಲಿರುವ ಮೂತ್ರಪಿಂಡದ ತೀವ್ರ ಹಾನಿ
(AKI in catabolic stages)
ಹೆಚ್ಚಾಗಿ ಬಾಯಿಯ ಮೂಲಕ ಪೋಷಕಾಂಶಗಳನ್ನು ಒದಗಿಸುವುದನ್ನು ಸೂಚಿಸಲಾಗುತ್ತದೆ.
ಶಕ್ತಿಯ ಆವಶ್ಯಕತೆ :
ರೋಗಿಯ ವೈಯಕ್ತಿಕ ಆವಶ್ಯಕತೆ ಮತ್ತು ರೋಗ ಪರಿಸ್ಥಿತಿಗೆ ತಕ್ಕಂತೆ ಆಹಾರ ಕ್ರಮವನ್ನು ರೂಪಿಸಬೇಕಾಗುವುದು. ಸಾಮಾನ್ಯವಾಗಿ ದಿನಕ್ಕೆ 20-35 ಕಿಲೋ ಕ್ಯಾಲರಿ/ಕೆ.ಜಿ ಅನ್ನು ಶಿಫಾರಸು ಮಾಡಲಾಗುವುದು.
ಪ್ರೊಟೀನ್ ಆವಶ್ಯಕತೆ :
ಇದು ಮತ್ತೆ ಕಾಯಿಲೆಯು ಚಯಾಪಚಯ ಹಂತದಲ್ಲಿ ಇದೆಯೋ ಅಥವಾ ಚಯಾಪಚಯ ಹಂತದಲ್ಲಿ ಇಲ್ಲದ ಮೂತ್ರಪಿಂಡದ ತೀವ್ರ ಹಾನಿಯೋ ಎಂಬುದನ್ನು ಅವಲಂಬಿಸುತ್ತದೆ. ಮೂತ್ರಪಿಂಡದ ತೀವ್ರ ಹಾನಿಯು ಚಯಾಪಚಯ ಹಂತದಲ್ಲಿ ಇಲ್ಲದಿದ್ದರೆ, ದಿನಕ್ಕೆ 0.8 -1.0 ಗಳ ಪ್ರೊಟೀನ್/ಕೆ.ಜಿ ಶಿಫಾರಸು ಮಾಡಲಾಗುವುದು. ರೋಗಿಯು ಡಯಾಲಿಸಿಸ್‌ನಲ್ಲಿ ಇದ್ದರೆ, ಆಗ ಡಯಾಲಿಸಿಸ್ ಕಾರಣದಿಂದ ಆಗುವ ಅಮಿನೋ ಆಸಿಡ್ ಮತ್ತು ಪ್ರೋಟೀನ್ ನಷ್ಟವನ್ನು ಸರಿದೂಗಿಸಲು ದಿನಕ್ಕೆ ಗರಿಷ್ಠ 1.7 ಗ್ರಾಂ ಪ್ರೊಟೀನ್/ಕೆ.ಜಿ ಅನ್ನು ಪೂರೈಸಬೇಕಾಗುವುದು.
ಖನಿಜಾಂಶಗಳ ಆವಶ್ಯಕತೆ :
ಪಾಸೆ#àಟ್ (mg/d) – 800 – 1000
ಪೊಟ್ಯಾಶಿಯಂ (mg/g – 2000 – 2500)
ಸೋಡಿಯಂ ( g/d) – 1.8- 2.5 )
ದ್ರವಾಹಾರ :
ರೋಗಿಯ ದೇಹತೂಕ ಮತ್ತು ಮೂತ್ರವಿಸರ್ಜನೆಯ ಪ್ರಮಾಣವನ್ನು ಹೊಂದಿಕೊಂಡು ವೈದ್ಯಕೀಯ ತಂಡದವರು ಸೇವಿಸಬೇಕಾದ ದ್ರವಾಹಾರದ ಪ್ರಮಾಣವನ್ನು ಸೂಚಿಸುತ್ತಾರೆ.
ಇಲೆಕ್ಟ್ರೋಲೈಟ್‌ಗಳು
ಶರೀರದಲ್ಲಿನ ಇಲೆಕ್ಟ್ರೋಲೈಟ್ ಮಟ್ಟವನ್ನು ಗಮನಿಸಬೇಕು ಮತ್ತು ಹೊಂದಾಣಿಕೆ ಮಾಡಿಕೊಳ್ಳ ಬೇಕು, ಕಾಯಿಲೆಯ ಹಂತವನ್ನು ಹೊಂದಿಕೊಂಡು ಇದೂ ಸಹ ವ್ಯತ್ಯಾಸವಾಗಬಹುದು.
ಇಲ್ಲಿನ ಮುಖ್ಯ ಉದ್ದೇಶ ಏನಾಗಿರಬೇಕು ಅಂದರೆ :
- ಪ್ರೋಟೀನ್ ನಷ್ಟವಾಗುವಿಕೆಯನ್ನು ತಡೆಯುವುದು.
- ಸರಿಯಾದ ದೇಹತೂಕ ಮತ್ತು ಪೋಷಕಾಂಶಗಳ ಮಟ್ಟವನ್ನು ಕಾಪಾಡಿಕೊಳ್ಳುವುದು.
- ಪೋಷಕಾಂಶಗಳ ಅಸಮತೋಲನದಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಿಕೊಳ್ಳುವುದು.
- ಗಾಯಮಾಯುವಿಕೆಯನ್ನು ಉತ್ತಮಪಡಿಸುವುದು.
- ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು.
- ಆಂಟಿ ಆಕ್ಸಿಡಾಂಟ್ ಚಟುವಟಿಕೆಯನ್ನು ಉತ್ತಮಪಡಿಸುವುದು ಮತ್ತು ಉರಿಯೂತವನ್ನು ತಗ್ಗಿಸುವುದು.