Advertisement

ಸುದೀಪ್ ದಂಪತಿ ಮತ್ತೆ ಒಂದಾಗುತ್ತಿದ್ದಾರೆ; ಕೋರ್ಟ್ ಗೆ ಹೇಳಿದ್ದೇನು?

04:42 PM Jan 09, 2017 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನಟ, ಕಿಚ್ಚ ಸುದೀಪ್ ದಂಪತಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಶುಭ ಸುದ್ದಿಯ ವರದಿಗಳು ಹೊರಬೀಳತೊಡಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಮಂಗಳವಾರ ಸುದೀಪ್ ದಂಪತಿಯ ವಿಚ್ಚೇದನ ಅರ್ಜಿ ವಿಚಾರಣೆ ನಡೆಯಿತು.

Advertisement

ಇಂದು ನಡೆದ ವಿಚಾರಣೆ ವೇಳೆ ಸುದೀಪ್ ಶೂಟಿಂಗ್ ನಿಮಿತ್ತ ಗೈರುಹಾಜರಾಗಿದ್ದು, ಸುದೀಪ್ ದಂಪತಿ ಒಂದಾಗುತ್ತಾರೆ ಎಂದು ಕಿಚ್ಚ ಪರ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ವಿವರಿಸಿದೆ.

ಏತನ್ಮಧ್ಯೆ ಸುದೀಪ್ ದಂಪತಿ ಮಧ್ಯಸ್ಥಿಕಾ ಕೇಂದ್ರಕ್ಕೆ ಹಾಜರಾಗುವಂತೆ ಕೌಟುಂಬಿಕ ನ್ಯಾಯಾಲಯ ಸೂಚನೆ ನೀಡಿದೆ. ಇದಕ್ಕೆ 2 ತಿಂಗಳು ಕಾಲಾವಕಾಶ ನೀಡಬೇಕೆಂದು ಸುದೀಪ್ ಪರ ವಕೀಲರು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next