Advertisement

ಗುಡ್ ನ್ಯೂಸ್: ವಿಚ್ಛೇದನ ಕೇಸ್ ವಾಪಸ್ ಪಡೆದ ಸುದೀಪ್ ದಂಪತಿ

11:54 AM Aug 24, 2017 | Sharanya Alva |

ಬೆಂಗಳೂರು:ಕೊನೆಗೂ ಸ್ಯಾಂಡಲ್ ವುಡ್ ನಟ ಸುದೀಪ್ ದಂಪತಿ ವಿಚ್ಛೇದನ ಪ್ರಕರಣ ಸುಖಾಂತ್ಯ ಕಂಡಿದೆ. ಹೌದು ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರು ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಮಗಳ ಭವಿಷ್ಯದ ಹಿತದೃಷ್ಟಿಯಿಂದ ಡೈವೋರ್ಸ್ ಕೇಸ್ ಅನ್ನು ಸುದೀಪ್ ಮತ್ತು ಪ್ರಿಯಾ ವಾಪಸ್ ಪಡೆದಿರುವುದಾಗಿ ವರದಿ ವಿವರಿಸಿದೆ. 2015ರಲ್ಲಿ ಸುದೀಪ್ ಮತ್ತು ಪ್ರಿಯಾ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಹಲವು ವಿಚಾರಣೆಗೆ ಇಬ್ಬರು ಗೈರುಹಾಜರಾಗಿದ್ದರು.

ಸುದೀಪ್ ಪರ ವಕೀಲರಾದ ಬಾಬು ಅವರು, ಇಬ್ಬರ ನಡುವಿನ ವೈಮನಸ್ಸು ಬಗೆಹರಿದಿರುವುದಾಗಿ ಸುದೀಪ್ ಮತ್ತು ಪತ್ನಿ ಸಹಿಯುಳ್ಳ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಕೋರ್ಟ್ ಅದನ್ನು ಪುರಸ್ಕರಿಸಿರುವುದಾಗಿ ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next