Advertisement

Bigg Boss; ಮಹಿಳಾ ಸ್ಪರ್ಧಿಗಳಿಗೆ ಕಿಚ್ಚನ ಕಿವಿಮಾತೇನು ಗೊತ್ತಾ?

11:18 AM Oct 30, 2023 | Team Udayavani |

ಬಿಗ್‌ ಬಾಸ್‌ 10ನೇ ಸೀಸನ್‌ನಡೆಯುತ್ತಿದೆ. ಈ ಹಿಂದಿನ 9 ಸೀಸನ್‌ಗಳನ್ನು ನೋಡಿದಾಗ ಅದರಲ್ಲಿ ಮಹಿಳಾ ಸ್ಪರ್ಧಿಯಾಗಿ ಗೆದ್ದಿದ್ದು ಕೇವಲ ಒಬ್ಬರೇ. ಅದು ಶ್ರುತಿ. ಉಳಿದ ಎಂಟು ಸೀಸನ್‌ಗಳಲ್ಲಿ ಗಂಡು ಮಕ್ಕಳೇ ಸ್ಟ್ರಾಂಗ್‌. ಹಾಗಾದರೆ ಮಹಿಳಾ ಸ್ಪರ್ಧಿಗಳು ಯಾಕೆ ಗೆಲ್ಲುತ್ತಿಲ್ಲ. ಇತ್ತೀಚೆಗೆ ಈ ಪ್ರಶ್ನೆಗೆ ನಟ ಸುದೀಪ್‌ ಉತ್ತರ ಕಂಡುಕೊಂಡಿದ್ದಾರೆ.

Advertisement

ಬಿಗ್‌ಬಾಸ್‌ ಮನೆಯಲ್ಲಿ ತಾವು ಆಟವಾಡದೇ ಬೇರೆಯವರಿಗೆ ಆಟ ಬಿಟ್ಟುಕೊಡುವ ಮನಸ್ಥಿತಿಯಿಂದಲೇ ಮಹಿಳಾ ಸ್ಪರ್ಧಿಗಳು ವಿನ್‌ ಆಗುತ್ತಿಲ್ಲ ಎಂದು ನೇರ ಹೇಳಿದ್ದಾರೆ. ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಆಯ್ಕೆ ವಿಚಾರ ಬಂದಾಗ ಮಹಿಳಾ ಸ್ಪರ್ಧಿಗಳು ಬೇರೆಯವರ ಹೆಸರನ್ನು ಸೂಚಿಸಿದರೇ ಹೊರತು ತಾವು ಕ್ಯಾಪ್ಟನ್‌ ಆಗುತ್ತೇನೆ ಎಂದು ಹೇಳಲಿಲ್ಲ.

ಈ ವೇಳೆ ಸುದೀಪ್‌, “ಬಿಗ್‌ಬಾಸ್‌ ಮನೆಗೆ ನೀವೆಲ್ಲರೂ ಆಡಲು ಬಂದಿದ್ದೀರಿ. ಆಟವನ್ನು ಬೇರೆಯವರಿಗೆ ಬಿಟ್ಟುಕೊಡ ಬೇಡಿ’ ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next