Advertisement

ಕಿಚ್ಚನ ಅಭಿಮಾನಿಗಳು ಫ‌ುಲ್‌ ಆಕ್ಟೀವ್

10:14 AM Mar 31, 2020 | Suhan S |

ಈಗಾಗಲೇ ಕೋವಿಡ್ 19 ಎಫೆಕ್ಟ್ ನಿಂದಾಗಿ ಎಲ್ಲೆಡೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಮೊದಲೇ ಸಂಕಷ್ಟದಲ್ಲಿದ್ದ ಬಡ ಕುಟುಂಬಗಳು ಇದೀಗ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಹಲವು ಸಿನಿಮಾ ತಾರೆಯರು ಸಹಾಯಕ್ಕೆ ನಿಂತಿದ್ದಾರೆ. ಅವರಷ್ಟೇ ಅಲ್ಲ, ಅವರ ಅಭಿಮಾನಿಗಳೂ ಸಹ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಹೌದು, ಸುದೀಪ್‌ ಅವರ ಅಭಿಮಾನಿಗಳು ಈಗ ಊಟವಿಲ್ಲದೆ, ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿರುವ ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಪ್ಯಾಕ್‌ಗಳಲ್ಲಿ ಆಹಾರವನ್ನು ಸಿದ್ಧಪಡಿಸಿಕೊಂಡಿರುವ ಸುದೀಪ್‌ ಅಭಿಮಾನಿಗಳು, ಬೆಂಗಳೂರಿನ ಜೆ.ಜೆ.ನಗರ, ಬ್ಯಾಟರಾಯನಪುರ, ಗೋರಿಪಾಳ್ಯ, ಬಂಗಾರಪ್ಪ ನಗರ ಸೇರಿದಂತೆ ಅನೇಕ ಕಡೆ ಅವರ ಅಭಿಮಾನಿಗಳನ್ನು ಬಡವರಿಗೆ ತಲುಪಿಸುವ ಮೂಲಕ ಅವರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ.

Advertisement

ಸದ್ಯಕ್ಕೆ ಬೆಂಗಳೂರಿನ ಕೆಲವು ಹಿಂದುಳಿದಿರುವ ನಗರಗಳಲ್ಲಿ ಆಹಾರ ವಿತರಿಸುತ್ತಿರುವ ಸುದೀಪ್‌ ಅಭಿಮಾನಿಗಳು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಒದಗಿಸುವ ಯೋಚನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸುದೀಪ್‌ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಒಂದಷ್ಟು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next