ಪ್ರಸ್ತುತ ಕಿಯಾ ಸಾನೆಟ್ ಎಸ್‌ಯುವಿ ಕಾರು ಹುಂಡೈ ಅವರ ವೆನ್ಯು, ಮಾರುತಿ ವಿಟಾರಾ ಬ್ರಿಝಾ ಮತ್ತು ಸದ್ಯದಲ್ಲೇ ಟೋಯೋಟೊ ಕಂಪನಿ ಬಿಡುಗಡೆ ಮಾಡುತ್ತಿರುವ ಅರ್ಬನ್ ಕ್ರ್ಯೂ ಸರ್‌ಗೆ ಸ್ಪರ್ಧೆ ನೀಡಲಿದೆ..
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಈಗಾಗಲೇ ಎರಡು ಕಾರುಗಳನ್ನು ಬಿಟ್ಟು ತನ್ನದೇ ಛಾಪು ಮೂಡಿಸಿರುವ ಕಿಯಾ ಕಂಪನಿ, ತನ್ನ ಮೂರನೇ ಕಾರನ್ನು ಬಿಡುಗಡೆಗೊಳಿಸಲು ಅಣಿಯಾಗಿದೆ. ಕಿಯಾ ಸೆಲ್ಟೋಸ್, ಕಿಯಾ ಕಾರ್ನೆವಲ್ ಮತ್ತು ಈಗ ಕಿಯಾ ಸಾನೆಟ್ ಎಸ್ ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆ.7ರಂದು ಈ ಕಾರಿನ ಪರಿಚಯ ಮಾಡಿಕೊಡಲಾಗಿದ್ದು, 4 ಮೀ. ಉದ್ದದ ಕಾಂಪ್ಯಾಕ್ಟ್ ಎಸ್ ಯುವಿಯಾಗಿದೆ.
ಸದ್ಯ ಈ ಕಾರು ಹುಂಡೈ ಅವರ ವೆನ್ಯು, ಮಾರುತಿ ವಿಟಾರಾ ಬ್ರಿಝಾ ಮತ್ತು ಸದ್ಯದಲ್ಲೇ ಟೋಯೋಟೊ ಕಂಪನಿ ಬಿಡುಗಡೆ ಮಾಡುತ್ತಿರುವ ಅರ್ಬನ್ ಕ್ರ್ಯೂಸರ್ ಗೆ ಸ್ಪರ್ಧೆ ನೀಡಲಿದೆ. ಅಂದಹಾಗೆ, ಈ ಕಾರು ಸೆಪ್ಟೆಂಬರ್‌ಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರ ಕಾನೆrಪ್ಟ್ ವರ್ಷನ್ ಅನ್ನು 2020ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಪ್ರದರ್ಶಿಸಿದ ಕಾರಿನಲ್ಲಿ ಹೆಚ್ಚೇನೂ ಬದಲಾವಣೆ ಮಾಡಲಾಗಿಲ್ಲ.
ಹೊರಾಂಗಣ ಮತ್ತು ಒಳಾಂಗಣ ಅತ್ಯಂತ ಆಕರ್ಷಕವಾಗಿ ಬಂದಿದೆ. ಇದರಲ್ಲಿ 10.25 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಇದೆ. ಸ್ಟೀರಿಂಗ್ ವ್ಹೀಲ್ ಮೌಂಟೆಡ್ ಕಂಟ್ರೋಲ್, ಡ್ರೈವ್ ಮತ್ತು ಟ್ರ್ಯಾಕ್ಷನ್ ಮೋಡ್ಸ್ ಮತ್ತು ಆ್ಯಂಬಿಯಂಟ್ ಲೈಟಿಂಗ್ ವ್ಯವಸ್ಥೆಯೂ ಇದೆ. ಇದು ಮೂರು ವರ್ಷನ್‌ಗಳ ಎಂಜಿನ್ ಸಾಮರ್ಥ್ಯದೊಂದಿಗೆ ಬರಲಿದೆ. 1.5 ಲೀ. ಡೀಸೆಲ್ ಎಂಜಿನ್, 1.0 ಲೀ. ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲಿ. ನ್ಯಾಚುರಲಿ ಆಸ್ಪಿರೇಟೇಡ್ ಪೆಟ್ರೋಲ್ ಎಂಜಿನ್ ಸಾಮರ್ಥ್ಯ ಹೊಂದಿದೆ. ಅಂದಹಾಗೆ ಇದು 1197ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. 8 ರಿಂದ 13 ಲಕ್ಷ ರೂ.ವರೆಗೆ ದರ ಇರಬಹುದು ಎಂದು ಅಂದಾಜಿಸಲಾಗಿದೆ.
ಚಂದಾದಾರಿಕೆಯಲ್ಲಿ ಕಾರು ಖರೀದಿ : ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ, ತನ್ನ ಎಲೆಕ್ಟ್ರಿಕ್ ವೆಹಿಕಲ್ ಟಾಟಾ ನೆಕ್ಸೋನ್ ಅನ್ನು ಮಾಸಿಕ ಚಂದಾದಾರಿಕೆಯಲ್ಲಿ ನೀಡಲು ನಿರ್ಧರಿಸಿದೆ. ಮಾಸಿಕ 41 ಸಾವಿರ ರೂ. ಪಾವತಿಸಿ ಟಾಟಾ ನೆಕ್ಸೋನ್ ಇವಿಯನ್ನು ಪಡೆಯಬಹುದಾಗಿದೆ. 18 ತಿಂಗಳಿಂದ 24 ಮತ್ತು 36 ತಿಂಗಳುಗಳ ವರೆಗೆ ಮಾಸಿಕ ಬಾಡಿಗೆ ರೀತಿಯಲ್ಲಿ ಈ ಕಾರನ್ನು ಬಳಕೆ ಮಾಡಬಹುದಾಗಿದೆ. 36 ತಿಂಗಳ ಸಬ್‌ಸ್ಕ್ರಿಪ್ಶನ್ ಮಾಡಿಕೊಂಡರೆ, ಮಾಸಿಕ 41,900, 24 ತಿಂಗಳಿಗೆ ಮಾಡಿಸಿಕೊಂಡರೆ 44,900 ಹಾಗೂ 18 ತಿಂಗಳಿಗೆ ಮಾಡಿಸಿಕೊಂಡರೆ 47,900 ರೂ. ನೀಡಬೇಕಾಗುತ್ತದೆ. ಸದ್ಯ ಬೆಂಗಳೂರು, ದೆಹಲಿ- ಎನ್‌ಸಿಆರ್, ಮುಂಬೈ, ಪುಣೆ, ಹೈದರಾಬಾದ್‌ನಲ್ಲಿ ಈ ಸೌಲಭ್ಯ ಸಿಗಲಿದೆ.