ವಾಷಿಂಗ್ಟನ್: ಮಿಸ್ ಇಂಡಿಯಾ ವರ್ಲ್ಡ್ ವೈಡ್ 2022 ಕಿರೀಟವನ್ನು ಯು.ಕೆ. ನಿವಾಸಿ ಖುಷಿ ಪಟೇಲ್ ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಮೆರಿಕದಲ್ಲಿ ಸ್ಪರ್ಧೆಯ ಅಂತಿಮ ಸುತ್ತು ನಡೆದಿದ್ದು, ಅದರಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಖುಷಿ ಬ್ರಿಟನ್ನಲ್ಲಿ ಬಯೋಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದು, ತಮ್ಮದೇ ಆದ ಬಟ್ಟೆ ಅಂಗಡಿಯನ್ನೂ ಹೊಂದಿದ್ದಾರೆ.
ಸ್ಪರ್ಧೆಯಲ್ಲಿ ಅಮೆರಿಕದ ವೈದೇಹಿ ಡೋಂಗ್ರೆ ಎರಡನೇ ಸ್ಥಾನ ಗೆದ್ದರೆ, ಶೃತಿಕಾ ಮಾನೆ ಮೂರನೇ ಸ್ಥಾನ ಪಡೆದಿದ್ದಾರೆ.
Related Articles
ಅಂತಿಮ ಸುತ್ತಿನಲ್ಲಿ ಒಟ್ಟು 12 ಸ್ಪರ್ಧಾಳುಗಳಿದ್ದರು. ಇದೇ ವೇಳೆ ಗಯಾನಾದ ರೋಷಣಿ ರಜಾಕ್ರನ್ನು ಮಿಸ್ ಟೀನ್ ಇಂಡಿಯಾ ವರ್ಲ್ಡ್ ವೈಡ್ 2022 ಎಂದು ಘೋಷಿಸಲಾಯಿತು.