Advertisement

ವೈದ್ಯರನ್ನು ನಾಯಿಗೆ ಹೋಲಿಸಿದ ಖೂಬಾ

11:03 PM Jun 09, 2019 | Lakshmi GovindaRaj |

ಬೀದರ: ಮಳೆಯಿಂದ ಬ್ರಿಮ್ಸ್‌ ಆಸ್ಪತ್ರೆ ಕಟ್ಟಡ ಮುಂಭಾಗದ ಛಾವಣಿ ಕುಸಿದ ಹಿನ್ನೆಲೆಯಲ್ಲಿ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಭಗವಂತ ಖೂಬಾ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ವೈದ್ಯರನ್ನು ನಾಯಿಗೆ ಹೋಲಿಸಿ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ನೋಡಿ ಬೇಸರ ವ್ಯಕ್ತಪಡಿಸಿದ ಸಂಸದ ಖೂಬಾ ಅವರೆದುರು, ರೋಗಿಗಳು ಕೂಡ ಸಮಸ್ಯೆಗಳ ಕುರಿತು ನೋವು ತೋಡಿಕೊಂಡರು. ಈ ಸಂದರ್ಭದಲ್ಲಿ ಸಂಸದ ಖೂಬಾ ವೈದ್ಯಾಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿಂದಿಯಲ್ಲಿ “ಕುತ್ತಾಬಿ ಕಾಮ್‌ ನಹಿ ಕರ್ತೆ ತುಮಾರೆ ಜೈಸಾ’ (ನಾಯಿಗಳೂ ನಿಮ್ಮಂತೆ ಕೆಲಸ ಮಾಡುವುದಿಲ್ಲ) ಎಂದು ವೈದ್ಯರ ವಿರುದ್ಧ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next