Advertisement
ಇಲ್ಲಿನ “ಇಂದಿರಾ ಗಾಂಧಿ ಸ್ಟೇಡಿಯಂ’ನಲ್ಲಿ ಜರಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಅಸ್ಸಾಮ್ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮುಖ್ಯ ಅತಿಥಿಗಳಾಗಿರುತ್ತಾರೆ.
“ಇದು ದೇಶದ ಕ್ರೀಡಾಕ್ರಾಂತಿಗೆ ಸಾಕ್ಷಿಯಾಗಬಲ್ಲ ಕೂಟ. ಇದು ಅಸ್ಸಾಮ್‌ನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲ ಕ್ರೀಡಾ ಪಟುಗಳಿಗೆ ಶುಭ ಹಾರೈಕೆಗಳು’ ಎಂದು ಸೋನೊವಾಲ್ ಈ ಸಂದರ್ಭದಲ್ಲಿ ಹೇಳಿದರು. ಕ್ರೀಡಾಳುಗಳ ಪ್ರಯಾಣಕ್ಕೆಂದೇ ವಿಮಾನ ವ್ಯವಸ್ಥೆ ಮಾಡಿರುವುದು ಈ ಬಾರಿಯ ವಿಶೇಷ. ಕೋಲ್ಕತಾ ಮತ್ತು ಹೊಸದಿಲ್ಲಿಯಿಂದ ಈ ವಿಮಾನ ಗುವಾಹಾಟಿಗೆ ಹಾರಾಟ ನಡೆಸಲಿದೆ.
Related Articles
ಈ ಕೂಟದಲ್ಲಿ ಕರ್ನಾಟಕದ 288 ಕ್ರೀಡಾಳುಗಳು ಪಾಲ್ಗೊಳ್ಳಲಿದ್ದಾರೆ. ಈಜು ಸ್ಪರ್ಧೆಯೊಂದರಲ್ಲೇ ನೂರರಷ್ಟು ಸ್ಪರ್ಧಿಗಳಿರುವುದು ವಿಶೇಷ. ಉಳಿದಂತೆ ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕಬಡ್ಡಿ, ಶೂಟಿಂಗ್, ವಾಲಿಬಾಲ್, ಕುಸ್ತಿ ಸ್ಪರ್ಧೆಗಳಲ್ಲಿ ರಾಜ್ಯದ ಕ್ರೀಡಾಳುಗಳು ಪದಕದ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿನ ಎರಡೂ ಆವೃತ್ತಿಗಳಲ್ಲಿ ಕರ್ನಾಟಕ 4ನೇ ಸ್ಥಾನ ಪಡೆದಿತ್ತು.
Advertisement