ಗುವಾಹಾಟಿ: ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಮೂರನೇ ಆವೃತ್ತಿಯು ಅಂತ್ಯಗೊಂಡಿದ್ದು ಸತತ ಎರಡನೇ ಬಾರಿ ಮಹಾರಾಷ್ಟ್ರ ಪ್ರಶಸ್ತಿ ಗೆದ್ದು ಕೊಂಡಿದೆ. ಮಹಾರಾಷ್ಟ್ರ 78 ಚಿನ್ನ ಸಹಿತ 256 ಪದಕ ಗೆದ್ದುಕೊಂಡಿದೆ.
13 ದಿನಗಳ ಕಾಲ ನಡೆದ ಈ ಕೂಟದಲ್ಲಿ ಒಟ್ಟು 200 ಪದಕ ಗೆದ್ದ ಹರಿಯಾಣ ದ್ವಿತೀಯ ಸ್ಥಾನ ಪಡೆದರೆ ದಿಲ್ಲಿ ಮೂರನೇ ಸ್ಥಾನ ಗಳಿಸಿದೆ.
ನೀವು ನಾವು ಹೆಮ್ಮೆಪಡುವಂತೆ ಮಾಡಿದಿರಿ. ಖೇಲೋ ಗೇಮ್ಸ್‌ನಲ್ಲಿ ಭಾಗವಹಿಸುವ ಮೂಲಕ ಗುವಾಹಾಟಿ ಮತ್ತು ಅಸ್ಸಾಂ ವಿಶ್ವಭೂಪಟದಲ್ಲಿ ಪ್ರಸಿದ್ಧಿಪಡುವಂತೆ ಮಾಡಿದಿರಿ. ನಮ್ಮ ಗುರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ಇರಲಿ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಗೇಮ್ಸ್‌ನ ಸಮಾರೋಪ ಭಾಷಣದಲ್ಲಿ ತಿಳಿಸಿದರು.
ಅಪೇಕ್ಷಾಗೆ ಮೂರು ಚಿನ್ನ
17 ವರ್ಷ ಕೆಳಗಿನ ವಿಭಾಗದಲ್ಲಿ ಮಹಾರಾಷ್ಟ್ರ ವನ್ನು ಪ್ರತಿನಿಧಿಸಿದ ಮೂಲತಃ ಕಿನ್ನಿಗೋಳಿಯವರಾದ ಅಪೇಕ್ಷಾ ಅವರು ಈಜು ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಗೆದ್ದಿದ್ದಾರೆ. ಇದರ ಜತೆ ರಿಲೇ ಸ್ಪರ್ಧೆಯಲ್ಲಿ ಎರಡು ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ.