Advertisement
2017ರಲ್ಲಿ ಉತ್ತರಾಖಂಡದಲ್ಲಿ ಅಧಿಕಾರ ಗದ್ದುಗೆಯಲ್ಲಿದ್ದ ಕಾಂಗ್ರೆಸ್ ಸರಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ, ಹೈಕಮಾಂಡ್ ಅಂದುಕೊಂಡಂತೆ ಅಲ್ಲಿ ಆಗಲಿಲ್ಲ. ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದ ನಲುಗಿದ ರಾಜ್ಯ ಬಿಜೆಪಿಗೆ ತೇಪೆ ಹಾಕಲು, ಪಕ್ಷದ ಹೈಕಮಾಂಡ್ ಪದೇ ಪದೆ ಅಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕಾಗಿ ಬಂದಿದ್ದು ವಿಪರ್ಯಾಸ. ಇದು ಧಮಿಯವರಿಗೆ ಟ್ರಬಲ್ ಆಗಿ ಪರಿಣಮಿಸಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.
2017ರ ಮಾ. 18ರಂದು ಮುಖ್ಯಮಂತ್ರಿಯಾ ಗಿದ್ದ ತ್ರಿವೇಂದ್ರ ಸಿಂಗ್ ರಾವತ್‌ರನ್ನು ಬದಲಾ ಯಿಸಿ ತೀರಥ್ ಸಿಂಗ್ ರಾವತ್ ಅವರನ್ನು ಸಿಎಂ ಮಾಡಲಾಯಿತು. 2021ರ ಮಾ. 10ರಂದು ಅಧಿಕಾರ ಗದ್ದುಗೆಯೇರಿದ ತೀರಥ್, 116 ದಿನಗಳ ಆಡಳಿತ ನಡೆಸುವಷ್ಟರಲ್ಲಿ ಮತ್ತೆ ಅಲ್ಲಿ ಒಳಬೇ ಗುದಿ ಭುಗಿಲೆದ್ದಿತು. ಮುಖ್ಯಮಂತ್ರಿಯನ್ನು ಬದಲಿಸುವ ನಿಟ್ಟಿನಲ್ಲಿ ಆಲೋಚಿಸಿದ ಬಿಜೆಪಿ ಹೈಕಮಾಂಡ್, ತನ್ನ ಎಂದಿನ ಸರ್‌ಪ್ರೈಸ್ ಸಿಎಂ ಕ್ಯಾಂಡಿಡೇಟ್ ತಂತ್ರಗಾರಿಕೆಯ ಮೊರೆ ಹೋಯಿತು. ಅದರ ಪರಿಣಾಮವಾಗಿ, 2021ರ ಜು. 4ರಂದು ತೀರಥ್ ಅವರಿಂದ ಸಿಎಂ ಹುದ್ದೆಗೆ ರಾಜೀನಾಮೆ ಪಡೆದ ಹೈಕ ಮಾಂಡ್, ಅವರ ಜಾಗಕ್ಕೆ ಕೇವಲ 2 ಬಾರಿ ಶಾಸಕರಾಗಿ ಅನುಭವವಿದ್ದ ಪುಷ್ಕರ್ ಸಿಂಗ್ ಧಮಿ ಅವರನ್ನು ತಂದು ಕುಳಿಸಿತು. ಈ ಬಾರಿ ಜಯ ಸುಲಭವಲ್ಲ
2012ರಲ್ಲಿ ಖಾಟೀಮಾದಲ್ಲಿ ಮೊದಲ ಬಾರಿ ಸ್ಪರ್ಧಿಸಿ, ಕಾಂಗ್ರೆಸ್‌ನ ದೇವೇಂದ್ರ ಚಂದ್ ವಿರುದ್ಧ ಜಯ ಗಳಿಸಿದ್ದ ಧಮಿ, 2017ರಲ್ಲಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆದರೆ 2ನೇ ಬಾರಿಯ ಜಯ ಅಷ್ಟು ದೊಡ್ಡದಾಗಿರಲಿಲ್ಲ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಭುವನ್ ಚಂದ್ರ ಕಾಪ್ರಿ ಅವರ ವಿರುದ್ಧ ಕೇವಲ 2,709 ಮತಗಳ ಅಂತರದಿಂದ ಜಯ ಸಾಧಿಸಿದ್ದರು.
Related Articles
Advertisement
ಇನ್ನು ಮತ್ತೊಂದು ಕಾರಣವೆಂದರೆ, ಪದೇ ಪದೆ ಮುಖ್ಯ ಮಂತ್ರಿಯನ್ನು ಬದಲಾಯಿಸಿರುವ ಬಿಜೆಪಿಯ ವರ್ಚಸ್ಸು ಕೊಂಚ ಕುಂದಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿರುವುದು.
ರಾಜ್ಯದ ಜನ ಹೇಗಿದ್ದಾರೆ?ಉತ್ತರಾಖಂಡ ರಾಜ್ಯ ಉದಯಿಸಿ 21 ವರ್ಷ ಗಳೇ ಕಳೆದಿದ್ದು, ಇಷ್ಟು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ರಾಜ್ಯದ ಜನತೆ ಬಿಜೆಪಿ ಅಥವಾ ಕಾಂಗ್ರೆಸ್ – ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರವೇ ಮಣೆ ಹಾಕಿದ್ದಾರೆ. ಅದರಲ್ಲೂ ಅತೀ ಹೆಚ್ಚು ಬಾರಿ ಅಧಿಕಾರ ಗದ್ದುಗೆಯಲ್ಲಿ ಇದ್ದದ್ದು ಕಾಂಗ್ರೆಸ್ಸೇ. ಈ ಹಿಂದೆ, ಎರಡು ಬಾರಿ (2000-21, 2009-11) ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ, ಅವರೆಡೂ ಒಂದೆರಡು ವರ್ಷಗಳ ಸರಕಾ ರಗಳಾಗಿದ್ದು ಗಮನಾರ್ಹ. ಖಟೀಮಾದ ಸದ್ಯದ ಪಲ್ಸ್
ಖಟೀಮಾ ಕ್ಷೇತ್ರದಲ್ಲಿ 1.20 ಲಕ್ಷ ಮತದಾರ ರಿದ್ದಾರೆ. ಇವರಲ್ಲಿ, 45 ಸಾವಿರ ಮತದಾರರು ಪಹಡಿ ಸಮುದಾಯಕ್ಕೆ ಸೇರಿದವರು. 25 ಸಾವಿರ ಮತದಾರರು ಎಸ್‌ಟಿ ಸಮುದಾಯ ದವರು. 14 ಸಾವಿರ ಮತದಾರರು ಪೂರ್ವಾಂಚಲದವರು. 10 ಸಾವಿರ ಸಿಕ್ಖ್ , 5 ಸಾವಿರ ಬಂಗಾಲಿಯರು ಹಾಗೂ ಆಗ್ರಾ ಮೂಲದವರು ಇದ್ದಾರೆ. ಇವರಲ್ಲಿ ಮುಸ್ಲಿಂ ಮತದಾರರು ಮೊದಲಿನಿಂದಲೂ ಬಿಜೆಪಿಯಿಂದ ದೂರ ಉಳಿದವರು. ಇನ್ನು, ಸಿಕ್ಖ್ ಸಮುದಾಯದ ಮಂದಿ ಇತ್ತೀಚೆಗಿನ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.