Advertisement
ಉಮಾ(45) ಬಂಧಿತ ಆರೋಪಿ. ಆಕೆಯಿಂದ 197 ಗ್ರಾಂ. ತೂಕದ ಚಿನ್ನಾಭರಣ ವಶ ಮಾಡಲಾಗಿದೆ. ಒಂದು ವರ್ಷದಿಂದ ಮಕ್ಕಳ ಚಿನ್ನಾಭರಣ ಕಳವಿಗೆ ಇಳಿದಿದ್ದ ಉಮಾ ಬಂಧನದಿಂದ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಆಕೆಯನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಹೀಗಾಗಿ ಆಕೆಯನ್ನು ಬಂಧಿಸುವ ಸಲುವಾಗಿ ಮಹಿಳಾ ಸಿಬ್ಬಂದಿಯನ್ನು ಮಫ್ತಿಯಲ್ಲಿ ಕರ್ತವ್ಯಕ್ಕೆ ಯೋಜಿಸಲಾಗಿತ್ತು. ಅದರಂತೆ ಕಳೆದ ಶುಕ್ರವಾರ ಸಿಬ್ಬಂದಿ ಮಕ್ಕಳನ್ನು ಎತ್ತಿಕೊಂಡಿದ್ದ ಪೋಷಕರ ಮುಂದೆಯೇ ಮಫ್ತಿಯಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಭಕ್ತೆಯ ಸೋಗಿನಲ್ಲಿ ಆಗಮಿಸಿದ ಉಮಾ ಮಗುವಿನಿಂದ ಕಾಲಿನ ಕಡಗ ಬಿಚ್ಚಿಕೊಂಡಿದ್ದನ್ನು ಸಿಬ್ಬಂದಿ ನೋಡಿ ಆಕೆಯ ಬೆನ್ನು ಬಿದ್ದರು. ಜತೆಗೆ, ಮತ್ತೂಂದು ಮಗುವಿನ ಕತ್ತಿನ ಸರವನ್ನು ಉಮಾ ಬಿಚ್ಚಿಕೊಳ್ಳುತ್ತಲೇ ಮಾಲಿನ ಸಮೇತ ಆಕೆಯನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ದಾಂಪತ್ಯ ಕಲಹಕ್ಕೆ ಕಾರಣಆರೋಪಿ ಉಮಾ ಎಸಗಿದ ಸರಕಳವು ಪ್ರಕರಣದಿಂದ ದಂಪತಿ ನಡುವೆ ಜಗಳ ನಡೆದು ವೈ ಮನಸ್ಸು ಬಂದಿರುವ ಪ್ರಸಂಗವೂ ನಡೆದಿದೆ. ದೇವಾಲಯಕ್ಕೆ ಆಗಮಿಸಿದ್ದ ಮಗುವಿನ ಸರಕಳೆದು ಹೋಗಿದ್ದರಿಂದ ಆತಂತಕ್ಕೀಡಾದ ಮಹಿಳೆ ಮನೆಗೆ ತೆರಳಿದಾಗ ಗಂಡ ಪ್ರಶ್ನಿಸಿದ್ದಾನೆ. ಈ ವೇಳೆ, ಆಕೆ ದೇವಾಲಯದ ಬಳಿ ಮಗುವಿನ ಸರ ಕಳುವಾಗಿದೆ ಎಂದು ತಿಳಿಸಿದ್ದಾಳೆ. ಇದನ್ನು ನಂಬದ ಆತ, ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ” ದೇವಾಲಯಗಳಲ್ಲಿ ಕಳ್ಳತನ ನಡೆಯಲು ಸಾಧ್ಯವೇ? ಅಲ್ಲಿಗೆ ಕಳ್ಳರು ಬರಲು ಸಾಧ್ಯವೇ? ನೀನೆ ಸರ ಏನೋ ಮಾಡಿದ್ದೀಯಾ’ಎಂದು ಬೈದಿದ್ದಾನೆ. ಈ ವಿಚಾರಕ್ಕೆ ದಂಪತಿ ನಡುವೆ ಜಗಳದಿಂದ ವಿರಸ ಉಂಟಾಗಿದೆ. ಕಡೆಗೆ ಮಹಿಳೆ ಪೊಲೀಸರ ಮೊರೆಹೋಗಿದ್ದಳು. ಹೀಗಾಗಿ, ದಂಪತಿಯನ್ನು ಕರೆಸಿ ವಿಷಯ ತಿಳಿಸಿದಾಗ ಸುಮ್ಮನಾದರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.