ನವಿಮುಂಬಯಿ: ಖಾರ್‌ಘರ್‌ನ ರಾಮ್‌ಶೇs… ಠಾಕೂರ್ ಇಂಟರ್‌ನ್ಯಾಷನಲ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಆ್ಯಂಡ್ ಖಾರ್‌ಘರ್ ಮ್ಯಾರಥಾನ್ ಸಮಿತಿಯವರು ಜ. 13ರಂದು ಆಯೋಜಿಸಿದ ಖಾರ್‌ಘರ್ ಮ್ಯಾರಥಾನ್-2019 ರ 36 ರಿಂದ 45 ವರ್ಷದೊಳಗಿನವರ ವಿಭಾಗದಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.
5 ಕಿ. ಮೀ. ಅಂತರನ್ನು 18 ನಿಮಿಷಗಳಲ್ಲಿ ಕ್ರಮಿಸಿ ಈ ಸಾಧನೆ ಯನ್ನು ಮಾಡಿರುವ ಶಿವಾನಂದ ಶೆಟ್ಟಿ ಅವರು, ಜ. 6 ರಂದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಹರಿಕೃಷ್ಣ ಗ್ರೂಪ್ ವತಿಯಿಂದ ನಡೆದ ಕಿಸ್ನಾ ಡೈಮಂಡ್ ಮ್ಯಾರಥಾನ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 21 ಕಿ. ಮೀ. ಅಂತರವನ್ನು 1 ಗಂಟೆ 26 ನಿಮಿಷ, 36 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಯನ್ನು ಮಾಡಿದ್ದಾರೆ.
ಡಿ. 30 ರಂದು ಬಾಂದ್ರಾ ತಾಜ್ ಹೊಟೇಲ್ ಸಮೀಪದಲ್ಲಿ ನಡೆದ 40 ರಿಂದ 50 ವರ್ಷದೊಳಗಿನವರ ಮುಂಬಯಿ 10ಕೆ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 10 ಕಿ. ಮೀ. ದೂರವನ್ನು 39 ನಿಮಿಷ, 29 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಎನ್‌ಇಬಿ ನ್ಪೋರ್ಟ್ಸ್ ಆಯೋಜಿಸಿದ ಅಲ್ಟಾÅ ಮ್ಯಾರಥಾನ್ 50 ಕಿ. ಮೀ. ಸ್ಪರ್ಧೆಯಲ್ಲಿ ಶಿವಾನಂದ ಶೆಟ್ಟಿ ಅವರು 4 ನೇ ಸ್ಥಾನ ಗಳಿಸಿದ್ದಾರೆ. 4 ಗಂಟೆ, 28 ನಿಮಿಷ, 56 ಸೆಕೆಂಡ್‌ಗಳಲ್ಲಿ ಈ ಸಾಧನೆಯನ್ನು ಮಾಡಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದ್ದು ವಿಶೇಷತೆಯಾಗಿದೆ.
ಅಂತಾರಾಷ್ಟ್ರಿಯ ಮಟ್ಟದ ಮ್ಯಾರಥಾನ್ ಪಟುವಾಗಿರುವ ಇವರು ಈವರೆಗೆ ನೂರಾರು ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.
ಕಳೆದ 13 ವರ್ಷಗಳಿಂದ ಕ್ರೀಡಾಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡು ತ್ತಿದ್ದು, ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದ ಸಾಧನೆ ಇವರದ್ದು, ಜ. 20 ರಂದು ಮುಂಬಯಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಟಾಟಾ ಮುಂಬಯಿ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ.
ಮೂಲತಃ ನಿಡ್ಡೋಡಿ ನಂದ ಬೆಟ್ಟುವಿನವರಾದ ಇವರು ಮುಂಬಯಿ ಹೊಟೇಲ್ ಕಾರ್ಮಿಕರಾಗಿದ್ದು, ಬಿಡುವಿನ ವೇಳೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರ ಸಿದ್ಧಿ-ಸಾಧನೆಗಳನ್ನು ಗುರುತಿಸಿ ನಗರದ ಹಲವಾರು ಸಂಘಟನೆಗಳು ಸಮ್ಮಾನಿಸಿ, ಗೌರವಿಸಿವೆ.