Advertisement

ಖರ್ಗೆ ಮುಖ್ಯಮಂತ್ರಿ ಆಗ್ಬೇಕಿತ್ತು

06:55 AM Jul 21, 2018 | Team Udayavani |

ಬೆಂಗಳೂರು: ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕದೆ ಇರುವುದು ಬೇಸರದ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು. 

Advertisement

ಖರ್ಗೆ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಪ್ರಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 9 ಬಾರಿ ವಿಧಾನಸಭೆಗೆ ಮತ್ತು 2 ಸಲ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿರುವ ಮಲ್ಲಿಕಾರ್ಜುನ ಖರ್ಗೆ ನಂಬಿದ
ತತ್ವಸಿದ್ಧಾಂತದಲ್ಲಿ ರಾಜಿಯಾದವರಲ್ಲ. ಹಲವು ಖಾತೆ ಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅವರಿಗೆ ಮುಖ್ಯಮಂತ್ರಿ
ಸ್ಥಾನ ಸಿಗಬೇಕಿತ್ತು. ಆ ಸ್ಥಾನ ಸಿಗದಿರುವುದು ನೋವಿನ ಸಂಗತಿ ಎಂದರು.

ಸೋನಿಯಾ ಮೆಚ್ಚುಗೆ: ಈ ಹಿಂದೆ ಸೋನಿಯಾಗಾಂಧಿ ಅವರು ಖರ್ಗೆ ಅವರನ್ನು ಕಾಂಗ್ರೆಸ್‌ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಈ ವೇಳೆ ದಕ್ಷಿಣ ಭಾರತದಿಂದ ಬಂದವರಿಗೆ ಹಿಂದಿ ಭಾಷೆ ಮೇಲೆ ಹಿಡಿತವಿರುವುದಿಲ್ಲ ಎಂಬ ಕಾರಣಕ್ಕಾಗಿ
ಕೆಲವರು ಖರ್ಗೆ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಆಗ ವಿರೋಧಿಸಿದವರೇ ಈಗ ಖರ್ಗೆ ಅವರ ಮಾತಿನ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಸ್ವತಃ ಸೋನಿಯಾ ಗಾಂಧಿ ಅವರು ನನ್ನ ಬಳಿ ಹೇಳಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next