Advertisement

ಕಲಬುರಗಿ ಹಿಂದುಳಿಯಲು ಖರ್ಗೆ ಕಾರಣ

06:19 AM Mar 16, 2019 | Team Udayavani |

ಜೇವರ್ಗಿ: ಕಲಬುರಗಿ ಜಿಲ್ಲೆ ಹಿಂದುಳಿಯಲು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆಯವರೇ ಕಾರಣ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಶಶೀಲ ನಮೋಶಿ ಹೇಳಿದರು. ಪಟ್ಟಣದ ವಿಜಯಪುರ ಕ್ರಾಸ್‌ ಬಳಿಯಿರುವ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಖರ್ಗೆ ಸುಮಾರು ಐದು ದಶಕಗಳ ಕಾಲ ಅಧಿಕಾರ ಅನುಭವಿಸಿ ಕಲಬುರಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದ್ದಾರೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸೋಲಿಸಿ ಉಮೇಶ ಜಾಧವ್‌ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಬೇಕು ಎಂದರು. 

ಮಾಜಿ ಶಾಸಕ ದೋಡ್ಡಪ್ಪಗೌಡ ಎಸ್‌. ಪಾಟೀಲ ನರಿಬೋಳ ಮಾತನಾಡಿ, ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ. ಕುರ್ಚಿ
ಉಳಿಸಿಕೊಳ್ಳೊದೇ ಅವರ ದೋಡ್ಡ ಸಾಧನೆಯಾಗಿದೆ. ಆದ್ದರಿಂದ ಕಲಬುರಗಿ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಭೇರಿ
ಶತಸಿದ್ಧ ಎಂದು ಹೇಳಿದರು. 

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಈ ಬಾರಿ ಖರ್ಗೆ ಗೆಲುವು ಸುಲಭದ ಮಾತಲ್ಲ. ಏನೇ ಆದರೂ
ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈ ಬಲಪಡಿಸೋಣ ಎಂದರು. ರಮೇಶ ಬಾಬು ವಕೀಲ,
ಮಲ್ಲಿನಾಥಗೌಡ ಯಲಗೋಡ, ಶೋಭಾ ಭಾಣಿ, ಪುಂಡಲೀಕ ಗಾಯಕವಾಡ, ಬಾಬು ಬಿ. ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ
ಸಾಯಿಬಣ್ಣ ದೊಡ್ಡಮನಿ, ನಗರ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next