Advertisement
ಶುಕ್ರವಾರ ಲೋಕಾಯುಕ್ತ ಕಚೇರಿಗೆ ತೆರಳಿ 394 ಪುಟಗಳ ದಾಖಲೆಯನ್ನು ಅಧಿಕಾರಿಗಳಿಗೆ ನೀಡಿ ಭೂ ಹಂಚಿಕೆ ಪ್ರಕರಣದ ಮಾಹಿತಿ ನೀಡಿದರು. ಕಾನೂನುಗಳನ್ನು ಗಾಳಿಗೆ ತೂರಿ ಖರ್ಗೆ ಕುಟುಂಬಸ್ಥರು “ಸಿದ್ಧಾರ್ಥ ವಿಹಾರ ಟ್ರಸ್ಟ್’ ಹೆಸರಿನಲ್ಲಿ ಸರಕಾರಿ ಸ್ವತ್ತನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಕೋಟ್ಯಂತರ ರೂ. ಸರಕಾರಿ ಆಸ್ತಿ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಡೆ ಸಿಎ ನಿವೇಶನ
ಈ ವೇಳೆ ಮಾತನಾಡಿದ ಎನ್.ಆರ್. ರಮೇಶ್, ಖರ್ಗೆ ಕುಟುಂಬ ತಮ್ಮ ರಾಜಕೀಯ ಪ್ರಭಾವ ಬಳಸಿ ಬಿಡಿಎ ಮತ್ತು ಕೆಐಎಡಿಬಿಯಲ್ಲಿ ನಿವೇಶನ ಪಡೆದಿದೆ. “ಸಿದ್ದಾರ್ಥ ವಿಹಾರ ಟ್ರಸ್ಟ್’ ಸಂಸ್ಥೆ ಹೆಸರಿಗೆ 2 ಪ್ರತ್ಯೇಕ ಪ್ರದೇಶಗಳಲ್ಲಿ 2 ಪ್ರತ್ಯೇಕ ಸರಕಾರಿ ಸಂಸ್ಥೆಗಳ ಮೂಲಕ 2 ಸಿಎ ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಳ್ಳುವ ಮೂಲಕ ಘೋರ ವಂಚನೆ ಎಸಗಿದ್ದಾರೆ ಎಂದರು. 2014ರಲ್ಲಿ ಈ ಟ್ರಸ್ಟ್ ಮೂಲಕ ಶಿಕ್ಷಣ ಉದ್ದೇಶಕ್ಕಾಗಿ ಬಿಟಿಎಂ ಲೇಔಟ್‌ನಲ್ಲಿ 4ನೇ ಹಂತದಲ್ಲಿ 30 ವರ್ಷಗಳ ಗುತ್ತಿಗೆ ಅವಧಿಗೆ ಬಿಡಿಎ ನಿವೇಶನ ಪಡೆದಿದ್ದು ಇದನ್ನು ಮರೆ ಮಾಚಿದೆ. ಈಗ ಯಲಹಂಕ ಬಳಿಯ ಬಾಗಲೂರಿನಲ್ಲಿ ಕೆಐಎಡಿಬಿ Hi -Tech Defence and Aerospace Park ಪ್ರದೇಶದಲ್ಲಿ ಖರ್ಗೆ ಕುಟುಂಬ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಹಂಚಿಕೆ ಮಾಡಿಸಿಕೊಂಡಿದೆ ಎಂದು ಆರೋಪಿಸಿದರು.
Related Articles
Advertisement
ಶೀಘ್ರ ರಾಜ್ಯಪಾಲರ ಭೇಟಿಇದೊಂದು ಕೋಟ್ಯಂತರ ರೂ. ಭೂ ಹಗರಣವಾಗಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ತನಿಖೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೇಳಲಾಗಿದೆ. ಸೋಮವಾರ ಅವಕಾಶ ನೀಡುವ ನಿರೀಕ್ಷೆಯಿದೆ ಎಂದು ಪಾಲಿಕೆ ಮಾಜಿ ಸದಸ್ಯರೂ ಆಗಿರುವ ರಮೇಶ್ ತಿಳಿಸಿದರು. ಸಿದ್ದುಗೆ ನಮ್ಮ ಬೆಂಬಲ
ಮುಡಾ ಪ್ರಕರಣದಲ್ಲಿ ಕಾನೂನು ಅದರ ಕ್ರಮವನ್ನು ಕೈಗೊಳ್ಳುತ್ತದೆ. ಸಂದರ್ಭ ಬಂದಾಗ ನಾವೂ ಪರಿಶೀಲಿಸುತ್ತೇವೆ. ಈಗಂತೂ ಏನೇನೂ ಇಲ್ಲ. ನಾವೀಗ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ