Advertisement

ಖನನ ಕುತೂಹಲ!

09:10 AM Apr 28, 2019 | Lakshmi GovindaRaju |

ಕನ್ನಡದಲ್ಲಿ ಈಗಂತೂ ಹೊಸಬರ ಚಿತ್ರಗಳು ಗಮನಸೆಳೆಯುತ್ತಿವೆ. ಜೊತೆಗೆ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸುತ್ತಿವೆ. ಹೊಸ ಪ್ರಯೋಗಗಳೊಂದಿಗೆ ಭರವಸೆ ಮೂಡಿಸುತ್ತಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ಆ ಸಾಲಿಗೆ ಈಗ “ಖನನ’ ಚಿತ್ರ ಹೊಸ ಸೇರ್ಪಡೆ ಎನ್ನಬಹುದು. ಇದು ಸಂಪೂರ್ಣ ಹೊಸಬರ ಚಿತ್ರ. ನಾಯಕ ಆರ್ಯವರ್ಧನ್‌ ಅವರಿಗೆ ಇದು ಮೊದಲ ಚಿತ್ರ.

Advertisement

ಸಾಮಾನ್ಯವಾಗಿ ಮೊದಲ ಸಲ ತೆರೆ ಮೇಲೆ ಕಾಣಿಸಿಕೊಳ್ಳುವ ನಾಯಕ ನಟರು ಒಂದು ಪಾತ್ರವನ್ನು ನೀಟ್‌ ಆಗಿ ಮಾಡುವತ್ತ ಮಾತ್ರ ಗಮನಹರಿಸುತ್ತಾರೆ. ಆದರೆ, “ಖನನ’ ಮೂಲಕ ಆರ್ಯವರ್ಧನ್‌ ಅವರು ಮೊದಲ ಸಿನಿಮಾದಲ್ಲೇ ಅವರು ಒಂದಲ್ಲ, ಎರಡಲ್ಲ ಐದು ಶೇಡ್‌ ಇರುವ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ.

ಹೌದು, ನಿರ್ದೇಶಕ ರಾಧಾ ಅವರು ಆರ್ಯವರ್ಧನ್‌ ಅವರಿಗೆ ಇಂಥದ್ದೊಂದು ಪಾತ್ರ ಕೊಟ್ಟಿದ್ದಾರೆ. ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎನ್ನುವ ನಿರ್ದೇಶಕ ರಾಧಾ, ಆರ್ಯವರ್ಧನ್‌ ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ಅದರಲ್ಲೂ ಪಾತ್ರಕ್ಕೆ ತಯಾರಾದ ರೀತಿ ಮೆಚ್ಚಲೇಬೇಕು. ಅವರಿಲ್ಲಿ ಒಬ್ಬ ಆರ್ಕಿಟೆಕ್ಟ್ ಆಗಿಯೂ, ದೇಹದಾರ್ಢ್ಯ ಪಟುವಾಗಿಯೂ, ಸೈಕೋ ಪಾತ್ರದಲ್ಲೂ ಮಿಂಚಿದ್ದಾರೆ.

ಇನ್ನೂ ಎರಡು ಶೇಡ್‌ ಪಾತ್ರ ಯಾವುದು ಎಂಬುದಕ್ಕೆ ಸಿನಿಮಾದಲ್ಲೇ ನೋಡಬೇಕು. ಇನ್ನು, ಈ “ಖನನ’ ಶೀರ್ಷಿಕೆ ಬಗ್ಗೆ ವಿವರಿಸುವ ನಿರ್ದೇಶಕರು, ಇದು ಸಂಸ್ಕೃತ ಪದ. ಭೂಮಿಯನ್ನು ಅಗೆಯುವುದಕ್ಕೆ ಹಾಗೆ ಕರೆಯುತ್ತಾರೆ. ಆ ಖನನ ಶೀರ್ಷಿಕೆಯನ್ನೇ ಬದುಕಿಗೂ ಹೋಲಿಸಿರುವುದಾಗಿ ಹೇಳುವ ಅವರು, ಪ್ರತಿಯೊಬ್ಬರ ಬದುಕಲ್ಲಿ ಒಂದಲ್ಲ ಒಂದು ದಿನ ಖನನ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ.

ಅದನ್ನೇ ಚಿತ್ರದಲ್ಲಿ ಬೇರೆ ರೂಪದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ ನಿರ್ದೇಶಕರು. ನಾಯಕ ಆರ್ಯವರ್ಧನ್‌ ಅವರಿಗೆ ಕಥೆ ಇಷ್ಟವಾಗಿದ್ದೇ ತಡ ಸಿನಿಮಾ ಪಾತ್ರಗಳಿಗೆ ಹೇಗೆ ನ್ಯಾಯ ಸಲ್ಲಿಸಬೇಕು ಎಂಬ ಸಣ್ಣ ಭಯ ಶುರುವಾಗಿದ್ದು ನಿಜವಂತೆ. ನಿರ್ದೇಶಕರು ಯಾವಾಗ, ಇಲ್ಲಿ ಐದು ಶೇಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅಂದಾಗ, ಎಲ್ಲಾ ಶೇಡ್‌ ಪಾತ್ರಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರ ಆಗಿದ್ದರಿಂದ ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲು ಸಮಯ ಬೇಕೆಂಬುದು ಅರಿವಾಗಿದೆ.

Advertisement

ಒಂದೊಂದೇ ಶೇಡ್‌ನ‌ ಪಾತ್ರದೊಳಗಿನ ಮನಸ್ಥಿತಿ ಹೇಗಿರುತ್ತೆ ಎಂಬುದನ್ನು ನಿಧಾನವಾಗಿ ಅರ್ಥಮಾಡಿಕೊಂಡ ಬಳಿಕ ಅದಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಪಟ್ಟಿದ್ದಾರಂತೆ. ಮೊದಲ ಚಿತ್ರದಲ್ಲೇ ಇಷ್ಟೊಂದು ಚಾಲೆಂಜ್‌ ಎದುರಿಸಿದ್ದು ಒಂದು ರೀತಿಯ ದೊಡ್ಡ ಅನುಭವ ಎನ್ನುವ ಆರ್ಯವರ್ಧನ್‌, ಇಲ್ಲಿ ಅನೇಕ ವಿಶೇಷತೆಗಳಿವೆ.

ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಸಿನಿಮಾವಾಗಿದ್ದು, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ ಎನ್ನುತ್ತಾರೆ. ಈ ಚಿತ್ರದಲ್ಲಿ ನಾಯಕಿ ಇಂಡೋ ಅಮೆರಿಕನ್‌ ಶೈಲಿಯ ಹುಡುಗಿ. ಆ ರೀತಿಯ ಪಾತ್ರಕ್ಕೆ ಎಲ್ಲೆಡೆ ಆಡಿಷನ್‌ ನಡೆಸಿದ ನಿರ್ದೇಶಕರಿಗೆ ಕೊನೆಗೆ ಸಿಕ್ಕಿದ್ದು, ಅಸ್ಸಾಂ ಚೆಲುವೆ.

ಕಥೆ ಹಾಗು ಪಾತ್ರಕ್ಕೆ ತಕ್ಕಂತೆ ಆ ನಾಯಕಿ ಕಾಣಿಸಬೇಕು ಎಂಬ ಕಾರಣಕ್ಕೆ ಅಸ್ಸಾಂನ ಕರಿಷ್ಮಾ ಬರುಹಾ ಅವರನ್ನು ಆಯ್ಕೆ ಮಾಡಿದ ಬಗ್ಗೆ ಹೇಳುತ್ತಾರೆ ನಿರ್ದೇಶಕ ರಾಧಾ. ಇನ್ನು, ಕರಿಷ್ಮಾ ಬರುಹಾ ಅವರಿಲ್ಲಿ ನೆಗೆಟಿವ್‌ ಪಾತ್ರ ಮಾಡಿದ್ದಾರಂತೆ. ಅಂದಹಾಗೆ, ಈ ಚಿತ್ರಕ್ಕೆ ಬಿ.ಶ್ರೀನಿವಾಸ್‌ರಾವ್‌ ನಿರ್ಮಾಪಕರು. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next