Advertisement

ಬಿಸಿಬಿಸಿ ಖಾನಾ ಬಜಾನ

03:36 PM Sep 22, 2018 | |

ನೂರಿನ್ನೂರು ತಿನಿಸುಗಳು ಸಿಗುವ ಆಹಾರ ಮೇಳಕ್ಕೆ ನೀವು ಹೋಗಿರಬಹುದು. ಆದರೆ, ಸಾವಿರಾರು ಬಗೆಯ ಖಾದ್ಯಗಳನ್ನು ಕೈಗೆಟಕುವ ದರದಲ್ಲಿ ಸವಿಯುವ ಅವಕಾಶ ನಿಮಗೆ ಸಿಕ್ಕಿದೆಯಾ? ಇಲ್ಲವಾದರೆ, ಈ ವಾರಾಂತ್ಯ ಫ್ರೀಡಂ ಪಾರ್ಕ್‌ಗೆ ಲಗ್ಗೆಯಿಡಿ. ಅಂತಾರಾಷ್ಟ್ರೀಯ ಮಟ್ಟದ ಬೃಹತ್‌ ಆಹಾರ ಮೇಳ ಅಲ್ಲಿ ನಡೆಯುತ್ತಿದ್ದು, ಸಿಲಿಕಾನ್‌ ಸಿಟಿಯ ಯಾವ ಹೋಟೆಲ್‌ನಲ್ಲೂ ದೊರೆಯದ ಸಾವಿರಾರು ಬಗೆಯ ಸಸ್ಯಾಹಾರಿ ತಿನಿಸುಗಳು ಅಲ್ಲಿ ಲಭ್ಯವಿದೆ. ರೆಡ್‌ ರಿಬ್ಬನ್‌ ಪ್ರೊ ಸಂಸ್ಥೆ ಈ ಆಹಾರಮೇಳವನ್ನು ಆಯೋಜಿಸಿದ್ದು, ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಮೇಳ ನಡೆಯುತ್ತಿದೆ. 

Advertisement

ಏನಿದರ ವಿಶೇಷ?
ಈ ಮೇಳದಲ್ಲಿ ದೆಹಲಿ, ಮಹಾರಾಷ್ಟ್ರ, ಪಂಜಾಬ್‌, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ 15 ರಾಜ್ಯಗಳ ವೈವಿಧ್ಯಮಯ ತಿನಿಸುಗಳು ಲಭ್ಯ. ಆಂಧ್ರದ ಪೋತರೇಕಲ, ಎರಕಾರಮ್‌ ದೋಸೆ, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್‌ ಪಾವ್‌, ತಮಿಳುನಾಡಿನ ಬ್ರಿಂಜಾಲ್‌ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತ್‌ನ ಫೆಡಾ, ಉತ್ತರ ಕರ್ನಾಟಕ ಶೈಲಿಯ ವಿವಿಧ ಖಾದ್ಯಗಳನ್ನು ಸವಿಯಬಹುದು. ವಿದೇಶಿ ಆಹಾರ ಮಳಿಗೆಗಳೂ ಇರಲಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಬಗೆಯ ಸಸ್ಯಾಹಾರಿ ಪದಾರ್ಥಗಳು ಸಿಗುತ್ತವೆ. 

ಬಿರಿಯಾನಿ ಐಸ್‌ಕ್ರೀಂ ಸ್ಪೆಷಲ್‌
ನೀವು ಎಂದೂ ತಿಂದಿರದ ವೈವಿಧ್ಯಮಯ ಫ್ಲೇವರ್‌ನ ಐಸ್‌ಕ್ರೀಂಗಳು ಮೇಳದಲ್ಲಿ ಲಭ್ಯ. ಅವುಗಳಲ್ಲಿ ಬಿರಿಯಾನಿ ಐಸ್‌ಕ್ರೀಂ ಮುಖ್ಯವಾದದ್ದು. ಅರ್ಜುನ್‌ ಐಸ್‌ಕ್ರೀಮ್ಸ್‌ ಹೊರತಂದಿರುವ ಈ ಐಸ್‌ಕ್ರೀಂ, ನಿಮ್ಮ ನಾಲಿಗೆಗೆ ಬಿರಿಯಾನಿಯ ಸ್ವಾದ ನೀಡುತ್ತದೆ. ಮಸಾಲ ಪದಾರ್ಥಗಳಿಂದ ಈ ಐಸ್‌ಕ್ರೀಂ ತಯಾರಿಸಲಾಗಿದೆ. ಅಷ್ಟೇ ಅಲ್ಲದೆ, ಐಸ್‌ಕ್ರೀಂ ದೋಸೆ, ಫ್ರೈಡ್‌ ಐಸ್‌ಕ್ರೀಂ, 

ಸಂಗೀತ ರಸಸಂಜೆ 
ಈ ಮೇಳ ಆಹಾರಪ್ರಿಯರನ್ನಷ್ಟೇ ಅಲ್ಲ, ಸಂಗೀತಪ್ರಿಯರನ್ನೂ ರಂಜಿಸಲಿದೆ. ಕನ್ನಡದ ರಾಕ್‌ಬ್ಯಾಂಡ್‌ ನಾಯಕ್‌ ಆ್ಯಂಡ್‌ ಜೋಯ್ಸ ಪ್ರಾಜೆಕ್ಟ್ ಮತ್ತು ಬೀಟ್‌ ಗುರೂಸ್‌ ತಂಡದವರು ಸಂಗೀತ ಸುಧೆ ಹರಿಸಲಿದ್ದಾರೆ.    

ಇದು ಸಸ್ಯಾಹಾರಿ ಆಹಾರ ಮೇಳವಾಗಿದ್ದು, ಸುಮಾರು 150 ಮಳಿಗೆಗಳು ಇರಲಿವೆ. ಸಾಮಾನ್ಯರ ಕೈಗೆಟಕುವಂತೆ 20 ರೂ.ನಿಂದ 150 ರೂ. ವರೆಗೆ ದರ ನಿಗದಿಪಡಿಸಲಾಗಿದೆ. 
 ಅನಿಲ್‌ ಗುಪ್ತಾ, ರೆಡ್‌ ರಿಬ್ಬನ್‌ ಪ್ರೊ ಸಂಸ್ಥಾಪಕ 
 
ಕಳೆದ ವರ್ಷವೂ ಆಹಾರಮೇಳವನ್ನು ಆಯೋಜಿಸಿದ್ದೆವು. ಈ ಬಾರಿ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಮೇಳ ನಡೆಯುತ್ತಿದ್ದು, ಸಂಗ್ರಹವಾದ ಹಣದಲ್ಲಿ ಒಂದು ಭಾಗವನ್ನು ಕೇರಳ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಲಿದ್ದೇವೆ.
ನವೀನ್‌ ಸುರೇಶ್‌, ಆಯೋಜಕರು 

Advertisement

ಮುಖ್ಯ ಆಕರ್ಷಣೆ
* ಕಾರ್ಬನ್‌ ಡೈ ಆಕ್ಸೆ„ಡ್‌ ಐಸ್‌ ಕ್ರೀಂ, ಜ್ಯೂಸ್‌
*ಬಿರಿಯಾನಿ ಫ್ಲೇವರ್ಡ್‌ ಐಸ್‌ ಕ್ರೀಂ
*ವೀಳೆದೆಲೆಯ ಚಾಟ್ಸ್‌
*ಐಸ್‌ಕ್ರೀಂ ದೋಸೆ

ಎಲ್ಲಿ?: ಫ್ರೀಡಂ ಪಾರ್ಕ್‌
ಯಾವಾಗ?: ಸೆ.22- 23, ಬೆಳಗ್ಗೆ 10-8
ಸಂಪರ್ಕ: 9886793265

Advertisement

Udayavani is now on Telegram. Click here to join our channel and stay updated with the latest news.

Next