Advertisement

ಖಮರುಲ್‌ ಅವರನ್ನು ಇನ್ನಿಲ್ಲದಂತೆ ಕಾಡಿತ್ತು ಮಾಣಿಪ್ಪಾಡಿ ವರದಿ

08:25 AM Sep 19, 2017 | Karthik A |

ಬೆಂಗಳೂರು: ಖಮರುಲ್‌ ಇಸ್ಲಾಂ ಸಚಿವರಾಗಿದ್ದಾಗ ಅವರನ್ನು ‘ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ’ಗೆ ಸಂಬಂಧಿಸಿದ ಅನ್ವರ್‌ ಮಾಣಿಪ್ಪಾಡಿ ವರದಿ ಇನ್ನಿಲ್ಲದಂತೆ ಕಾಡಿತ್ತು. ಕೋಟ್ಯಂತರ ರೂ. ಮೊತ್ತದ ವಕ್ಫ್ ಆಸ್ತಿ ಕಬಳಿಕೆ ಆಗಿದೆ ಎಂದು 2012ರಲ್ಲಿ ಆಗ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಬಿಜೆಪಿಯ ಅನ್ವರ್‌ ಮಾಣಿಪ್ಪಾಡಿ ಸರಕಾರಕ್ಕೆ  ವರದಿ ಸಲ್ಲಿದ್ದರು. ಅದರಲ್ಲಿ ಖಮರುಲ್‌ ಇಸ್ಲಾಂ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಹೆಸರಿಸಲಾಗಿತ್ತು.

Advertisement

ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸುವಂತೆ ಒತ್ತಾಯಿಸುತ್ತಿದ್ದ ಬಿಜೆಪಿ ಈ ವಿಚಾರವಾಗಿ 2013ರಲ್ಲಿ ಸಚಿವರಾದಾಗಿ ನಿಂದಲೂ ಖಮರುಲ್‌ ಇಸ್ಲಾಂ ಅವರನ್ನು ಗುರಿಯಾಗಿಸಿತ್ತು. ಈ ನಡುವೆ ವರದಿ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದರು ಎಂದು ಖಮರುಲ್‌ ಇಸ್ಲಾಂ ವಿರುದ್ಧ ಬಿಜೆಪಿ ವಿಧಾನ ಪರಿಷತ್ತಿನಲ್ಲಿ ಹಕ್ಕುಚ್ಯುತಿ ಮಂಡಿಸಿತ್ತು. ಆಯೋಗದ ವರದಿ ಸದನಕ್ಕೆ ಮಂಡಿಸುವಂತೆ ಸಭಾಪತಿ ಸಹ ರೂಲಿಂಗ್‌ ಕೊಟ್ಟಿದ್ದರು.

ಆದಾಗ್ಯೂ ತಾಂತ್ರಿಕ ಕಾರಣಗಳನ್ನು ನೀಡಿ ಸರಕಾರ ವರದಿ ಮಂಡನೆಯಿಂದ ತಪ್ಪಿಸಿಕೊಳ್ಳುತ್ತಿತ್ತು. ಈ ಸಂದರ್ಭ ಖಮರುಲ್‌ ವಿರುದ್ಧ ಸದನದಲ್ಲಿ ಧರಣಿ ಜಟಾಪಟಿ ನಡೆದಿತ್ತು. ಈ ವಿಷಯ ಖಮರುಲ್‌ ಇಸ್ಲಾಂ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಸದನದಲ್ಲಿ ಇರುಸು – ಮುರುಸು ಅನುಭವಿಸಿದ್ದ ಅವರು, ತುಂಬಾ ನೊಂದುಕೊಂಡಿದ್ದರು. ಸಚಿವ ಸಂಪುಟದಿಂದ ಕೈ ಬಿಟ್ಟಾಗ ಮುಖ್ಯಮಂತ್ರಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next