Advertisement

Sikh ಅಧಿಕಾರಿಗೆ ಖಲಿಸ್ಥಾನಿ ಗೇಲಿ; ಇದು ಬಿಜೆಪಿಯ ನಿಜವಾದ ಕೋಮು ಮುಖ: ಮಮತಾ

04:33 PM Feb 28, 2024 | Team Udayavani |

ಕೋಲ್ಕತಾ : ರಾಜ್ಯದ ಸಿಖ್ ಐಪಿಎಸ್ ಅಧಿಕಾರಿಯೊಬ್ಬರನ್ನು ಖಲಿಸ್ಥಾನಿ ಎಂದು ಗೇಲಿ ಮಾಡಿರುವುದು ಬಿಜೆಪಿಯ ನಿಜವಾದ ಕೋಮುವಾದಿ ಮುಖವನ್ನು ತೋರಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

Advertisement

ಅಧಿಕೃತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಮಮತಾ “ಪಗ್ಡಿ (ಟರ್ಬನ್) ಧರಿಸಿದ್ದ ಸಿಖ್ ಐಪಿಎಸ್ ಅಧಿಕಾರಿಯನ್ನು ಬಿಜೆಪಿಯವರು ಖಲಿಸ್ಥಾನಿ ಎಂದು ಕರೆಯುತ್ತಾರೆ. ಇದು ಅವರ ನಿಜವಾದ ಕೋಮು ಮುಖವಾಗಿದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಪ್ರಕ್ಷುಬ್ಧ ಸಂದೇಶ್‌ಖಾಲಿಗೆ ರಾಜ್ಯದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭೇಟಿ ನೀಡುವುದನ್ನು ತಡೆಯಲು ನಿಯೋಜಿತರಾಗಿದ್ದ ಸಿಖ್ ಐಪಿಎಸ್ ಅಧಿಕಾರಿಯೊಬ್ಬರನ್ನು ಕಳೆದ ವಾರ ‘ಖಲಿಸ್ಥಾನಿ’ ಎಂದು ಬಿಂಬಿಸಿ ಬಿಜೆಪಿ ಕಾರ್ಯಕರ್ತರು ನಿಂದಿಸಿದ್ದರು ಎಂಬ ಆರೋಪದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ತಮ್ಮ ಸರಕಾರದ ಕಲ್ಯಾಣ ಯೋಜನೆಗಳನ್ನು ನಕಲು ಮಾಡುತ್ತಿವೆ. ನಾವು ಪಶ್ಚಿಮ ಬಂಗಾಳಕ್ಕೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಅವರ ಪಕ್ಷದ ಆಡಳಿತವಿರುವ ಹಲವಾರು ರಾಜ್ಯಗಳು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿವೆ ಎಂಬುದು ಸತ್ಯ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಧಿಕಾರಿಯ ಜತೆಗಿದ್ದ ಬಿಜೆಪಿ ಶಾಸಕಿ ಅಗ್ನಿಮಿತ್ರ ಪೌಲ್, ಪೊಲೀಸ್ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಮಾತ್ರವಲ್ಲದೆ ಬಿಜೆಪಿ ಬೆಂಬಲಿಗರು ಅವರನ್ನು ‘ಖಲಿಸ್ಥಾನಿ’ ಎಂದು ಕರೆದಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next