ಟೊರಾಂಟೋ: ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿನ ಹಿಂದೂ ದೇವಾಲಯಕ್ಕೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ದಾಳಿ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಬ್ರಿಟಿಷ್ ಕೊಲಂಬಿಯಾದ ಪ್ರಾಂತ್ಯವಾಗಿರುವ ಕೆನಡಾದ ಸುರ್ರೆಯಲ್ಲಿರುವ ಲಕ್ಷ್ಮೀ ನಾರಾಯಣ ದೇಗುಲದ ಮೇಲೆ ಖಲಿಸ್ತಾನಿಯರು ದಾಳಿ ಮಾಡಿದ್ಧಾರೆ. ಇದು ಕೆನಡಾದ ಅತ್ಯಂತ ಹಳೆಯ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ದೇಗುಲದ ಮೇಲೆ ದಾಳಿ ಮಾಡಿದ್ದಷ್ಟೇ ಅಲ್ಲದೇ ದೇಗುಲದ ಗೋಡೆಗಳಿಗೆ ಖನಿಸ್ತಾನ್ ಪರ ಪೋಸ್ಟರ್‌ಗಳನ್ನೂ ಅಂಟಿಸಿದ್ದಾರೆ.
2023 ರ ಜೂನ್ 18 ರಂದು ಕೊಲೆಯಾದ ಖಲಿಸ್ತಾನ್ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಹಿಂದೆ ಭಾರತದ ಪಾತ್ರವಿದೆ ಎಂದು ಎಂದು ದಾಳಿಕೋರರು ಆರೋಪಿಸಿದ್ದಾರೆ. ಈ ಕುರಿತು ಕೆನಡಾ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಪೋಸ್ಟರ್ ಅಂಟಿಸಿದ್ಧಾರೆ.
ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಮಾಸ್ಕ್ ಧರಿಸಿ ಬಂದಿದ್ದ ಇಬ್ಬರು ಖಲಿಸ್ತಾನ್ ಹೋರಾಟಗಾರರು ದೇವಾಲಯದ ಮೇಲೆ ದಾಳಿ ಮಾಡುವ ದೃಶ್ಯಗಳು ಸೆರೆಯಾಗಿದೆ. ಅಲ್ಲದೆ ದೇಗುಲದ ಗೋಡೆಗಳಿಗೆ ಮತ್ತು ಗೇಟ್‌ಗೆ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದೂ ಸೆರೆಯಾಗಿದೆ.
ಈ ವರ್ಷವೊಂದರಲ್ಲೇ ಕೆನಡಾದಲ್ಲಿ ದಾಳಿಗೊಳಗಾದ ನಾಲ್ಕನೇ ಹಿಂದೂ ದೇಗುಲ ಇದಾಗಿದ್ದು, ಖಲಿಸ್ತಾನ್ ಬೆಂಬಲಿಗರ ಈ ಕೃತ್ಯಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: Atiq Encounter; ಯಾರೋ ಬಂದು ಗುಂಡು ಹಾರಿಸುವುದು ಹೇಗೆ?: ಯೋಗಿ ಸರ್ಕಾರಕ್ಕೆ ಸುಪ್ರೀಂ ಚಾಟಿ