Advertisement

ಗಣರಾಜ್ಯೋತ್ಸವಕ್ಕೆ ಖಾಕಿ ಕಣ್ಗಾವಲು

11:59 AM Jan 26, 2018 | Team Udayavani |

ಬೆಂಗಳೂರು: ಮಹದಾಯಿ ಬಂದ್‌ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಿಗಿಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಯಶಸ್ವಿಯಾದ ಪೊಲಿಸ್‌ ಇಲಾಖೆ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗೂ ಕಟ್ಟೆಚ್ಚರ ವಹಿಸಿದೆ. 

Advertisement

ಮಾಣಿಕ್‌ ಷಾ ಪರೇಡ್‌ ಮೈದಾನ, ವಿಧಾನ ಸೌಧ, ಹೈಕೋರ್ಟ್‌, ಎಂ.ಎಸ್‌ ಬಿಲ್ಡಿಂಗ್‌ ಸೇರಿದಂತೆ  ಸರ್ಕಾರಿ ಕಚೇರಿ ಕಟ್ಟಡಗಳ ಬಳಿ ಬಂದೋಬಸ್ತ್  ಕೈಗೊಂಡಿದೆ. ಆಯಾ ವಿಭಾಗದ ಎಲ್ಲ ಡಿಸಿಪಿಗಳಿಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸುವಂತೆ ನಗರ ಪೊಲೀಸ್‌  ಆಯುಕ್ತ ಟಿ.ಸುನೀಲ್‌ಕುಮಾರ್‌ ಸೂಚನೆ ನೀಡಿದ್ದಾರೆ. 

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಜರುಗುವ ಗಣರಾಜ್ಯೋತ್ಸವದ ಭದ್ರತೆಗೆ 9 ಡಿಸಿಪಿ, 16 ಎಸಿಪಿ, 51 ಪಿಐ, 92 ಪಿಎಸ್‌ಐ, 16 ಮಹಿಳಾ ಪಿಎಸ್‌ಐ, 77 ಎಎಸ್‌ಐ, 535 ಎಚ್‌ಸಿ/ಪಿಸಿ, 71 ಮಹಿಳಾ ಸಿಬ್ಬಂದಿ, 56 ಕ್ಯಾಮೆರಾ ಸಿಬ್ಬಂದಿ, 126 ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ, 8 ಕೆಎಸ್‌ಆರ್‌ಪಿ ತುಕಡಿ, 2 ಡಿಸ್ವಾಟ್‌ ತಂಡ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಗುರುಡ ಪಡೆ ಹಾಗೂ ಕಮಾಂಡ್‌ ಕಂಟ್ರೋಲ್‌ ವಾಹನಗಳು, 8 ಎ.ಎಸ್‌.ಪರಿಶೀಲನಾ ತಂಡಗಳನ್ನು ನಿಯೋಜಿಸಿದ್ದು ಮುಂಜಾನೆಯೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದೆ. 

ಅಲದೆ ಸಾರ್ವಜನಿಕ ಪ್ರದೇಶಗಳಾದ ಮೆಜೆಸ್ಟಿಕ್‌, ರೈಲ್ವೇ ನಿಲ್ದಾಣ, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಸೇರಿದಂತೆ  ಇನ್ನಿತರೆ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದ್ದು, ಹೊಯ್ಸಳ ವಾಹನಗಳು ಗಸ್ತು ತಿರುಗಲಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next