Advertisement

ನಾಳೆಯಿಂದ ಖಾದಿ-ಗ್ರಾಮೋದ್ಯೋಗ ಉತ್ಸವ

12:19 AM Jan 15, 2020 | Lakshmi GovindaRaj |

ಬೆಂಗಳೂರು: ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ “ಖಾದಿ ಉತ್ಸವ-2020′ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಜ.16ರಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭ್ಲಸ್ವಾಮಿ ತಿಳಿಸಿದರು.

Advertisement

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.16ಕ್ಕೆ ಬೆಳಗ್ಗೆ 12.15ಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಉತ್ಸವ ಜ.16ರಿಂದ ಫೆ.14ರವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಇರಲಿದ್ದು, ರಜೆ ದಿನಗಳಲ್ಲೂ ನಡೆಯಲಿದೆ ಎಂದರು. ಮಹಾತ್ಮಗಾಂಧಿ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಈ ಬಾರಿ ಖಾದಿ ಉತ್ಸವ ಹಲವು ವಿಶೇಷತೆಗಳಿಂದ ಕೂಡಿದೆ.

200 ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, 120 ಖಾದಿ ಉತ್ಪನ್ನಗಳ ಮಳಿಗೆ ನೀಡಲಾಗಿದೆ. ಇದರಲ್ಲಿ 80 ಕರ್ನಾಟಕದ ಖಾದಿ ಉತ್ಪನ್ನ ಮಾರಾಟಗಾರರಿದ್ದಾರೆ. ಅಲ್ಲದೆ, 100ರಿಂದ 150 ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇದಕ್ಕೆ 1.50 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಪ್ರಾತ್ಯಕ್ಷಿಕೆ ಈ ಬಾರಿಯ ವಿಶೇಷತೆ: ಉತ್ಸವದಲ್ಲಿ ಈ ಬಾರಿ ಜೇನುಸಾಕಣೆ, ಬಟ್ಟೆ ನೇಯುವುದು, ಗುಡಿ ಕೈಗಾರಿಕೆ, ಮಡಿಕೆ ಮಾಡುವುದು ಸೇರಿದಂತೆ ಖಾದಿ ಉತ್ಪನ್ನಗಳ ಉತ್ಪಾದನೆ ತಯಾರಿಕೆ ಪ್ರಾತ್ಯಕ್ಷಿಕೆಗೈ ಅವಕಾಶ ಕಲ್ಪಿಸಲಾಗಿದೆ. ಉತ್ಸವ ದಲ್ಲಿ ಧಾರವಾಡ, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲ ಕೋಟೆ, ಬೆಳಗಾವಿ ಜಿಲ್ಲೆಯ ಅರಳೇ ಖಾದಿ ಮತ್ತು ಉಣ್ಣೆ ಉತ್ಪನ್ನ ದೊರೆಯಲಿವೆ. ವಾಣಿಜ್ಯ ಬೆಳೆ ಮತ್ತು ಸಾಂಬಾರು ಪದಾರ್ಥಗಳ ಉತ್ಪನ್ನವೂ ದೊರೆಯಲಿದೆ ಎಂದು ಜಯವಿಭವ ಸ್ವಾಮಿ ತಿಳಿಸಿದರು.

ಉತ್ಸವದಲ್ಲಿ ರಿಯಾಯ್ತಿ: ಖಾದಿ ಉತ್ಸವದಲ್ಲಿ ಖಾದಿ ರೇಷ್ಮೆ ಬಟ್ಟೆಗಳಿಗೆ ಶೇ.25 ಹಾಗೂ ಖಾದಿ ಬಟ್ಟೆಗಳಿಗೆ ಶೇ.35 ರಿಯಾಯ್ತಿ ಇರುತ್ತದೆ. ವಿವಿಧ ರಾಜ್ಯಗಳ ಉತ್ಪನ್ನಗಳೂ ದೊರೆ ಯುವು ದರಿಂದ ಗ್ರಾಹಕರಿಗೆ ವೈವಿಧ್ಯಮಯ ಸಂಗ್ರಹ ದೊರೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next