ಬೆಂಗಳೂರು: ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದ ಮನೆಯ ಡಬ್ಬಿಯಲ್ಲಿನ ಹಣವನ್ನೂ ಖರ್ಚು ಮಾಡುವಂತೆ ಆಗಿದೆ. ಈಗಾಗಲೇ ರಿಸರ್ವ್ ಬ್ಯಾಂಕ್ ನಲ್ಲಿದ್ದ ಫಂಡ್ ನ್ನು ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಂಗಾರವನ್ನೂ ಒತ್ತೆ ಇಡುವ ಪರಿಸ್ಥಿತಿ ಬರುತ್ತದೆ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಸಾರ್ವಜನಿಕ ಉದ್ಯಮಿಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಪೆಟ್ರೋಲ್ ಕಂಪನಿಗಳನ್ನು ವಿದೇಶಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆ ಯಾರ ಬೇನಾಮಿ ಹೆಸರಿನಲ್ಲಿದೆ ಎನ್ನುವುದನ್ನು ಬಹಿರಂಗಗೊಳಿಸಬೇಕು. ಯಾವ ಸಾರ್ವಜನಿಕ ಕಂಪನಿಗಳನ್ನು ಕೇಂದ್ರ ಸರ್ಕಾರ ಖಾಸಗಿ ಕರಣಗೊಳಿಸಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಬೇಕು ಎಂದರು.
ಮಹಾರಾಷ್ಟ್ರದಲ್ಲಿ ರಾತ್ರೋ ರಾತ್ರಿ ಪ್ರಮಾಣ ವಚನ ಸ್ವೀಕರಿಸುವ ಅಗತ್ಯ ಏನಿತ್ತು. ಹರಿಯಾಣದಲ್ಲಿ ಅವರಿಗೆ ಬೆಂಬಲ ಕೊಟ್ಟರೆ ಅವರ ಕುಟುಂಬದವರನ್ನು ಬೇಲ್ ಮೇಲೆ ಬಿಡುಗಡೆ ಮಾಡುತ್ತಾರೆ. ದೇಶದಲ್ಲಿ ಯಾವ ಸರ್ಕಾರ ನಡೆಯುತ್ತಿದೆ..ಪ್ರಜಾಪ್ರಭುತ್ವದ ಸರ್ಕಾರ ಇದೀಯಾ ಹಿಟ್ಲರ್ ಸರ್ಕಾರ ನಡೆಯುತ್ತಿದೆಯಾ ಎನ್ನುವುದನ್ನು ತಿಳಿಯಬೇಕು ಎಂದು ಹೇಳಿದರು.
ಬಿಜೆಪಿಯವರು ತಮ್ಮ ಸಾಧನೆ ತೋರಿಸಿ ಮತ ಪಡೆಯುವ ಪರಿಸ್ಥಿತಿ ಇಲ್ಲ. ಚುನಾವಣೆಯಲ್ಲಿ ಪಾಕಿಸ್ತಾನ ತೋರಿಸಿ ಮತ ಕೇಳುತ್ತಾರೆ. ಭಾವನಾತ್ಮಕ ವಿಷಯ ಮುಂದಿಟ್ಟು ಚುನಾವಣೆ ನಡೆಸುತ್ತಿದೆ. ರಾಜ್ಯದಲ್ಲಿ ಜನರ ವಿರೋಧಿ ಸರ್ಕಾರ ನಡೆಯುತ್ತಿದೆ..ಫಲಾನುಭವಿಗಳಿಗೆ ನೀಡಿರುವ ಚೆಕ್ ಬೌನ್ಸ್ ಆಗುತ್ತಿವೆ ಖಾಸಗಿ ಬಂಡವಾಳಶಾಹಿಗಳ ಪರವಾದ ನಿಲುವು ಜನರು ಒಪ್ಪುವುದಿಲ್ಲ. ಹರಿಯಾಣ, ಮಹಾರಾಷ್ಟ್ರ ದ ರೀತಿಯಲ್ಲಿ ರಾಜ್ಯದ ಜನರು ತೀರ್ಪು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಬೇಕು ಎಂದರು.
ಅಲ್ಪ ಸಂಖ್ಯಾತ ನಾಯಕರು ಎಲ್ಲರು ಅವರಿಗೆ ಒಪ್ಪಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಾಂಗ್ರೆಸ್ ನಲ್ಲಿ ಎಲ್ಲರೂ ಇಗ್ಗಟ್ಟಾಗಿದ್ದೇವೆ. ಸುಪ್ರೀಂ.ಕೋರ್ಟ್ ಅನರ್ಹ ಅಂತ ಯೋಗ್ಯತೆ ಇಲ್ಲ ಅಂತರ ಹೇಳಿರುವುದರಿಂದ.ಜನರು ಅವರಿಗೆ ಮತ ಹಾಕಬಾರದು. ಅವರಿಗೆ ಯೋಗ್ಯತೆ.ಇಲ್ಲ ಅಂತ.ಕೋರ್ಟ್ ಹೇಳಿದೆ ಎಂದರು.