ಕೊರಟಗೆರೆ : ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲೋಕಾಯಕ್ತ ಸಾರ್ವಜನಿಕ ಕುಂದು ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆ ಯಶಸ್ವಿಯಾಗಿ ನಡೆಸಲಾಯಿತು.
ಸಭೆಯಲ್ಲಿ ಸಾರ್ವಜನಿಕರು ಮತ್ತು ರೈತರು ಸುಮಾರು 15 ಅರ್ಜಿಗಳನ್ನು ಸಲ್ಲಿಸಿದರು. ಅದರಲ್ಲಿ 8 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡಲಾಯಿತು. ಉಳಿದ 7 ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲು ಲೋಕಾಯುಕ್ತ ಎಸ್ ಪಿ ವಾಲಿ ಬಾಷಾ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿಗಳ ಮತ್ತು ಹಲವು ಇಲಾಖೆಗಳಲ್ಲಿ ರೈತರ ಕೆಲಸ ಕಾರ್ಯಗಳಾಗದೆ ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಖ್ಯವಾಗಿ ತಾಲ್ಲೂಕು ಕಚೇರಿಯಲ್ಲಿ ಬಗರ್ ಹುಕ್ಕುಂ ಸಾಗುವಳಿ ಜಮೀನಿನ ವಿಚಾರವಾಗಿ ಸಾಗುವಳಿ ಮಂಜೂರಾಗಿದ್ದರು ಕೂಡ ಖಾತೆ-ಪಹಣಿ ಮಾಡಲು ಅಧಿಕಾರಿಗಳು ಲಂಚವನ್ನು ಕೇಳುತ್ತಿದ್ದಾರೆ ಎಂಬ ಆರೋಪವನ್ನು ರೈತ ಸಂಘದ ಮುಖಂಡರು ಸಭೆಯಲ್ಲಿ ಲೋಕಾಯಕ್ತ ಅಧಿಕಾರಿಗಳ ಗಮನಕ್ಕೆ ತಂದ ಘಟನೆ ನಡೆಯಿತು.
ಸಾರ್ವಜನಿಕ ಶೌಚಾಲಯಗಳ ಪರಿಶೀಲಿಸಲು ಮುಂದಾದ ಲೋಕಾಯುಕ್ತ ಅಧಿಕಾರಿಗಳು
Related Articles
ಕರ್ನಾಟಕ ರಣಧೀರರ ವೇದಿಕೆಯ ತಾಲೂಕು ಅಧ್ಯಕ್ಷರಾದ ಮಂಜುಸ್ವಾಮಿ ಎಂ. ಎನ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಕೆ ಎನ್ ದೇವರಾಜ್ ರವರು ಕೊರಟಗೆರೆ ಪಟ್ಟಣದ ಸಾರ್ವಜನಿಕ ಶೌಚಾಲಯಗಳಲ್ಲಿನ ಸ್ವಚ್ಛತೆ ಬಗ್ಗೆ ದೂರು ಅರ್ಜಿ ಸಲ್ಲಿಸಿದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಶೌಚಾಲಯವನ್ನು ಗಮನಿಸಿ ಪಟ್ಟಣ ಪಂಚಾಯಿತಿಯ ಆರೋಗ್ಯ ಅಧಿಕಾರಿಗೆ ಒಂದು ವಾರದ ಒಳಗಾಗಿ ತಾಲೂಕಿನ ಎಲ್ಲಾ ಸಾರ್ವಜನಿಕ ಶೌಚಾಲಯಗಳು ನೀರಿನ ವ್ಯವಸ್ಥೆಯೊಂದಿಗೆ ಪುನರಾರಂಭವಾಗಬೇಕೆಂದು ಖಡಕ್ ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಒಂದು ವಾರದ ಒಳಗಾಗಿ ಸಾರ್ವಜನಿಕ ಶೌಚಾಲಯಗಳು ಪುನರ್ ಆರಂಭವಾಗದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪತ್ರಕರ್ತರ ಸಮ್ಮುಖದಲ್ಲಿ ತಿಳಿಸಿದರು.
ನಂತರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಜಿಲ್ಲಾ ಮುಖ್ಯ ಅಧೀಕ್ಷಕರಾದ ವಾಲಿ ಬಾಷಾ, ಮಂಜುನಾಥ್, ಮತ್ತು ಲೋಕಾಯುಕ್ತ ಅಧಿಕಾರಿಗಳು ಹಾಗೂ ಗ್ರೇಡ್ 2 ತಹಶೀಲ್ದಾರ್ ನರಸಿಂಹಮೂರ್ತಿ, ಇಓ ದೊಡ್ಡ ಸಿದ್ದಯ್ಯ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮತ್ತು ರೈತರು ಹಾಜರಿದ್ದರು.
ಇದನ್ನೂ ಓದಿ: ವರುಣದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು, ಕೊನೆಯ ಚುನಾವಣೆ ಅಲ್ಲೇ ಆಗಲಿ: ಸಿದ್ದರಾಮಯ್ಯ