ಗ್ರಾಮೀಣ ಹಿನ್ನೆಲೆಯ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರ “ಖಡಕ್ ಹಳ್ಳಿ ಹುಡುಗರು’. ಈ ಚಿತ್ರಕ್ಕೆ ಎಂ.ಯು. ಪ್ರಸನ್ನ ಹಳ್ಳಿ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ.
ಹಳ್ಳಿಯ ಹುಡುಗರು ಏನೇನೆಲ್ಲಾ ಕಪಿಚೇಷ್ಟೇಗಳನ್ನು ಮಾಡುತ್ತಾರೋ ಅದನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಕಥೆ ಹೇಳುತ್ತಾ ಸಾಗುವ ನಿರ್ದೇಶಕರು ಕೊನೆಗೆ ಅವರಿಂದ ಇಡೀ ಹಳ್ಳಿಗೆ ಉಪಯೋಗವಾಗುವಂಥ ಒಂದು ಮಹತ್ಕಾರ್ಯ ಮಾಡಿಸಹೊರಟಿದ್ದಾರೆ.
ಈ ಚಿತ್ರದ ಕಥೆಯನ್ನು ಹಿರಿಯ ನಟ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅವರ ಬಳಿ ತೆಗೆದುಕೊಂಡು ಹೋದಾಗ ಅವರು ಸಹ ತುಂಬಾನೇ ಇಷ್ಟಪಟ್ಟು, ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ನಾಡಿನ ರೈತರಿಗೆ ನಮನ ಸಲ್ಲಿಸುವಂಥ ಸುಂದರ ಗೀತೆಯೊಂದನ್ನು ಹಾಡಿದ್ದಾರೆ. ಆ ವಿಶೇಷ ಹಾಡಿನ ಬಿಡುಗಡೆ ಕಾರ್ಯಕ್ರಮವನ್ನು ಗಣರಾಜ್ಯೋತ್ಸವದ ದಿನವೇ ಚಿತ್ರತಂಡ ಹಮ್ಮಿಕೊಂಡಿತ್ತು. ರಾಜೀವ ರಾಥೋಡ್, ದೀಪು ವಿಜಯ್, ವರದರಾಜ್, ಪ್ರಭಾಸ್ ರಾಜ್, ವರದ ರಾಜ್, ಮಜಾ ಭಾರತ ಖ್ಯಾತಿಯ ಚಂದ್ರಪ್ರಭ, ಮಹಾಂತೇಶ್, ಉದಯ್, ಧರ್ಮ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಎಂ.ಯು. ಪ್ರಸನ್ನ ಹಳ್ಳಿ ಲಾಕ್‌ಡೌನ್ ಸಮಯದಲ್ಲಿ ನಮ್ಮ ಹಳ್ಳಿಕಡೆ ಹೋದಾಗ ಅಲ್ಲಿನ ಪರಿಸರ ನೋಡಿ, ಈ ಕಥೆ ರೆಡಿಮಾಡಿಕೊಂಡೆ. ಹಳ್ಳಿ ಹುಡುಗರು ಯಾವ ಥರ ಇರ್ತಾರೆ ಎಂಬುದನ್ನು ಇಟ್ಟುಕೊಂಡು 8 ಜನ ಹುಡುಗರ ಮೇಲೆ ಈ ಕಥೆ ಮಾಡಿದೆ. ರಾಘಣ್ಣ ಈ ಸಾಹಿತ್ಯ ನೋಡಿ ಇಷ್ಟಪಟ್ಟು ಹಾಡಿದರು. ಮಂಡ್ಯ, ಹಾಸನ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ. ಚಿತ್ರದಲ್ಲಿ ಕಾಲೇಜ್ ಸಾಂಗ್, ಪ್ಯಾಥೋ, ಐಟಂ ಅಲ್ಲದೆ ಕನ್ನಡ ಭಾಷೆಯ ಮೇಲೂ ಒಂದು ಹಾಡಿದ್ದು, ಎಲ್ಲಾ ಹಾಡುಗಳಿಗೆ ನಾನೇ ಸಾಹಿತ್ಯ ರಚಿಸಿದ್ದೇನೆ. ಸುಧೀಶಾಸ್ತ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನನ್ನ ಸಹೋದರ ಪುನೀತ ಪಾಟೀಲ್ ಹಾಗೂ ಸಿಂಹ ಸೇರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:‘ಮಿತ್ರೋ’ ಎನ್ನುವುದು ಒಮಿಕ್ರಾನ್ ಗಿಂತ ಅಪಾಯಕಾರಿ: ಪ್ರಧಾನಿ ಮೋದಿಗೆ ಶಶಿ ತರೂರ್ ಟಾಂಗ್
ಪ್ರಮುಖ ಪಾತ್ರದಾರಿ ರಾಜೀವ ರಾಥೋಡ್ ಮಾತನಾಡುತ್ತಾ, ನಿರ್ದೇಶಕ ಪ್ರಸನ್ನ ಅವರು ಒಂದು ಘಟ ನೆ ಯ ಮೇಲೆ ಈ ಕಥೆ ಮಾಡಿದ್ದಾರೆ. ಈ ಹಾಡನ್ನು ಕೇಳಿ ಅಪ್ಪು ತುಂಬಾ ಇಷ್ಟಪಟ್ಟಿದ್ದರು. ಎಂಟು ಜನ ಹುಡುಗರಲ್ಲಿ ನಾನೂ ಒಬ್ಬ ಎಂದರು. ಪ್ರಭಾಸ್ ರಾಜ್ ಮಾತನಾಡಿ, ಚಿತ್ರದಲ್ಲಿ ನನ್ನದು ಕೋ ಡೈರೆಕ್ಟರ್ ಪಾತ್ರ ಎಂದು ಹೇಳಿದರು.
ಹುಡುಗಾಟವಾಡಿಕೊಂಡಿದ್ದ ಹಳ್ಳಿಯ ಎಂಟು ಜನ ಹುಡುಗರು ಒಂದು ಹಂತದಲ್ಲಿ ಸೀರಿಯಸ್ ಆಗ್ತಾರೆ, ಆನಂತರ ಚಿತ್ರದ ಕಥೆ ಸಸ್ಪೆನ್ಸ್, ಥ್ರಿಲ್ಲರ್‌ಗೆ ಟರ್ನ್ ಆದಾಗ ಮುಂದೇನಾಗುತ್ತದೆ ಎನ್ನುವುದೇ ಖಡಕ್ ಹಳ್ಳಿಹುಡುಗರ ಒನ್‌ಲೈನ್ ಸ್ಟೋರಿ ಎನ್ನಬಹುದು. ವಿಶೇಷವಾಗಿ 14 ವರ್ಷದ ಹುಡುಗ ಧ್ರುವ ಈ ಚಿತ್ರದ ಟೈಟಲ್ ಸಾಂಗನ್ನು ಕಂಪೋಸ್ ಮಾಡಿದ್ದಾರೆ.