2018 ರ ಡಿ. 21ರಂದು “ಕೆಜಿಎಫ್’ ಮೊದಲ ಭಾಗ ತೆರೆಗೆ ಬಂದಿತ್ತು. “ಕೆಜಿಎಫ್’ ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ ಅದೇ ದಿನ (ಡಿ.21)ದಂದು ಚಿತ್ರತಂಡ, “ಕೆಜಿಎಫ್-2′ ಚಿತ್ರದಕುರಿತಂತೆ ಪ್ರಮುಖ ಅಪ್ಡೆàಟ್ ಪ್ರೇಕ್ಷಕರಿಗೆ ನೀಡಲಿದೆಯಂತೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, “ಅಭಿಮಾನಿಗಳು ಈ ವರ್ಷ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ, ಅವರಿಗಾಗಿ ಡಿ. 1
ರಂದು10 ಗಂಟೆಗೆ ನಮ್ಮ ತಂಡದ ಎಲ್ಲಾ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಪ್ರಮುಖಅಪ್ಡೆàಟ್ ಒಂದು ಅಭಿಮಾನಿಗಳಿಗೆ ಸಿಗಲಿದೆ’ ಎಂದಿದ್ದಾರೆ. ಸದ್ಯ ಈ ಅಪ್ ಡೇಟ್ ಬಗ್ಗೆ ಒಂದಷ್ಟು ಕುತೂಹಲ ಮೂಡಿದ್ದು, ಡಿ.21 ರಂದು”ಕೆಜಿಎಫ್-2′ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಕುತೂಹಲಕ್ಕೆ ನಾಳೆ ತೆರೆಬೀಳದೆ.
ದರ್ಶನ್ ಗ್ರೀನ್ ಇಂಡಿಯಾ ಚಾಲೆಂಜ್ :
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ಇಲ್ಲದ ಸಮಯದಲ್ಲಿ ಗೆಳೆಯರ ಜೊತೆ ಲಾಂಗ್ ರೈಡ್ ಹೋಗುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ.ಈಬಾರಿ ದರ್ಶನ್ ತಮ್ಮ ಟೀಮ್ ಜೊತೆಗೆ ಕೇರಳಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆ ದರ್ಶನ್ ಆ್ಯಂಡ್ ಟೀಮ್ ದಾರಿಯಲ್ಲಿ ಗಿಡಗಳನ್ನು ನೆಡುವ ಮೂಲಕ “ಗ್ರೀನ್ ಇಂಡಿಯಾ ಚಾಲೆಂಜ್’ನಲ್ಲಿ ಭಾಗವಹಿಸಿದೆ.
ಸದ್ಯ ದರ್ಶನ್ “ಗ್ರೀನ್ ಇಂಡಿಯಾ ಚಾಲೆಂಜ್’ ಪೂರ್ಣಗೊಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ದರ್ಶನ್ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು “ಗ್ರೀನ್ ಇಂಡಿಯಾ’ ಚಾಲೆಂಜ್‌ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಟರಾದ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಪನ್ನಗಾಭರಣ ಮೊದಲಾದವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ.