Advertisement
ಮಂಗನ ಕಾಯಿಲೆ ಲಸಿಕೆ ಸಾಮರ್ಥ್ಯ ಕುಸಿದಿರುವ ಬಗ್ಗೆ ವಿಡಿಎಲ್ ಲ್ಯಾಬ್ ವರದಿ, ತಜ್ಞರ ಸಂಶೋಧನಾ ವರದಿಗಳು ಬಹಿರಂಗಗೊಂಡ ಮೇಲೆ 2022-23ರ ಅವ ಧಿಗೆ ನೀಡಬೇಕಿದ್ದ ಲಸಿಕೆಗಳನ್ನು ಆರೋಗ್ಯ ಇಲಾಖೆ ತಡೆಹಿಡಿದಿತ್ತು. ಈ ಬಗ್ಗೆ ಉದಯವಾಣಿ’ ಡಿ.8ರಂದು ದಾಖಲೆ ಸಮೇತ ವರದಿ ಮಾಡಿತ್ತು. ನಂತರ ಈ ಲಸಿಕೆಯನ್ನು ಹಿಮಾಚಲದ ಪ್ರದೇಶ ಸೆಂಟ್ರಲ್ ಡ್ರಗ್ ಲ್ಯಾಬೊರೇಟರಿ (ಸಿಡಿಎಲ್)ಗೆ ಕಳುಹಿಸಿತ್ತು. ಅಲ್ಲಿಂದ ವರದಿ ಆರೋಗ್ಯ ಇಲಾಖೆ ಕೈಸೇರಿದ್ದು, ಲಸಿಕೆ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲವಾಗಿರುವುದನ್ನು ಇಲಾಖೆ ಒಪ್ಪಿಕೊಂಡಿದೆ.
Related Articles
ದೇಶದ ಯಾವುದೇ ಲಸಿಕೆಗಳು ಮೊದಲು ಸಿಡಿಎಲ್‌ನಲ್ಲಿ ಪರೀಕ್ಷೆಗೆ ಒಳಪಡಬೇಕು. ಅಲ್ಲಿ ಉತ್ತೀರ್ಣವಾದಾಗ ಮಾತ್ರ ಅದನ್ನು ಜನರ ಬಳಕೆ ನೀಡಬೇಕು. ಆದರೆ ಕೆಎಫ್‌ಡಿ ವಿಚಾರದಲ್ಲಿ ಇದು ಆಗಿರಲಿಲ್ಲ. ಸ್ಥಳೀಯವಾಗಿ ನಡೆಸುತ್ತಿದ್ದ ಪರೀಕ್ಷೆಗಳು ಅ ಧಿಕಾರಿಗಳ ವೈಫಲ್ಯವನ್ನು ಎತ್ತಿಹಿಡಿದಿತ್ತು. ಅದಕ್ಕಾಗಿ ಆ ವರದಿಗಳು ಹೊರಬಂದಿರಲಿಲ್ಲ. ಈಗ ಅನಿವಾರ್ಯವಾಗಿ ಆರೋಗ್ಯ ಇಲಾಖೆ ತನ್ನ ತಪ್ಪನ್ನು ಒಪ್ಪಿಕೊಂಡಿದೆ.
Advertisement
ಮುಂದೇನು?ಹೊಸ ಲಸಿಕೆ ಉತ್ಪಾದನೆ ಹೊಣೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೊತ್ತಿದೆ. ಫೆ.23ರಂದು ಐಸಿಎಂಆರ್ ಲಸಿಕೆ ಉತ್ಪಾದಕರಿಂದ ಅರ್ಜಿ ಆಹ್ವಾನಿಸಿದೆ. ಕೊರೊನಾ ಲಸಿಕೆಗೆ ನಡೆದ ತುರ್ತು ಅವಶ್ಯಕ ಪ್ರಕ್ರಿಯೆ ಮೂಲಕ ಕೆಎಫ್‌ಡಿಗೂ ಲಸಿಕೆ ತಯಾರು ಮಾಡಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು. ಆಗ ಮಾತ್ರ 8 ಜಿಲ್ಲೆಗಳ, 5 ರಾಜ್ಯಗಳ ಲಕ್ಷಾಂತರ ಜನರಿಗೆ ನೆಮ್ಮದಿ ಸಿಗಲಿದೆ. 2 ತಿಂಗಳು ನಿರ್ಣಾಯಕ
ಪ್ರಸ್ತುತ ಆರೋಗ್ಯ ಇಲಾಖೆ ಕೆಎಫ್‌ಡಿ ಮೇಲೆ ನಿಗಾ ವಹಿಸಿದೆ. ಈವರೆಗೆ 3 ಪ್ರಕರಣ ದಾಖಲಾಗಿವೆ. ಬೇಸಿಗೆ ಬಿಸಿ ಏರುತ್ತಿದ್ದು ಮಾರ್ಚ್, ಏಪ್ರಿಲ್ ನಿರ್ಣಾಯಕವಾಗಲಿದೆ. ಈ ಅವ ಧಿಯಲ್ಲಿ ವೈರಸ್ ಪ್ರೌಢಾವಸ್ಥೆಯಲ್ಲಿದ್ದು ಹೆಚ್ಚು ಹಾನಿ ಮಾಡುತ್ತದೆ. ಯಾವುದಾದರೊಂದು ಸ್ಥಳದಲ್ಲಿ ಇದು ಸ್ಫೋಟಗೊಂಡರೆ ಪರಿಸ್ಥಿತಿ ಕೈಮೀರುವುದು ಸಹಜ. ಪ್ರಸ್ತುತ ಇದಕ್ಕೆ ಯಾವುದೇ ಔಷಧಿ ಇಲ್ಲ. ಕೆಎಫ್‌ಡಿ ಲಸಿಕೆ ವರದಿ ಕೈಸೇರಿದೆ. ಅದನ್ನು ಬಳಸಲು ಬರುವುದಿಲ್ಲ, ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ತಿಳಿಸಿದ್ದಾರೆ. ಹೊಸ ಲಸಿಕೆ ಈಗ ಬೇಕಾಗಿದೆ. ಐಸಿಎಂಆರ್ ಜತೆ ಸಭೆಯಾಗಿದೆ. ಲಸಿಕೆ ಉತ್ಪಾದಕಾ ಕಂಪನಿಗಳಿಗೆ ಟೆಂಡರ್ ಕರೆಯಲಾಗಿದೆ.
– ಡಿ. ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ -ಶರತ್ ಭದ್ರಾವತಿ