ಚಿಕ್ಕಮಗಳೂರು: ಮಲೆನಾಡಿನಲ್ಲಿ ಇದೀಗ ಮತ್ತೆ ಮಂಗನ ಕಾಯಿಲೆ ಪತ್ತೆಯಾಗಿದ್ದು, ಈ ವರ್ಷದ ಮೊದಲ ಕೆ.ಎಫ್.ಡಿ (ಮಂಗನಕಾಯಿಲೆ) ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊಪ್ಪದಲ್ಲಿದ್ದ ಕೆಲಸ ಮಾಡುತ್ತಿದ್ದ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್ ಡಿ ಪತ್ತೆಯಾಗಿದೆ.
ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅರೋಗ್ಯ ಇಲಾಖೆ ಟೆಸ್ಟ್ ಗೆ ಕಳುಹಿಸಿತ್ತು. ಈ ವೇಳೆ ಕೆಎಫ್ ಡಿ ಪ್ರಕರಣ ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ:‘ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ..’: ಶಾಸಕ ರಾಜೇಗೌಡ ಆಡಿಯೋ ವೈರಲ್
ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಕರಣ ಪತ್ತೆಯಾದ ವ್ಯಕ್ತಿಯಿದ್ದ ಸ್ಥಳ ಹಾಗೂ ಸುತ್ತಮುತ್ತ ಪ್ರತಿ ವ್ಯಕ್ತಿಗಳ ಬಗ್ಗೆ ನಿಗಾ ಇಡಲಾಗಿದೆ.