ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಲ್ಲಿನ ಹಣಕಾಸು ಇಲಾಖೆಯ ವಕ್ತಾರನಾಗಿ ನೇಮಕವಾಗಿರುವ ಅಹ್ಮದ್ ವಲಿ ಹಕ್ಮಲ್, ಕೆಲವು ವರ್ಷಗಳ ಹಿಂದೆ ಅಫ್ಘಾನಿಸ್ತಾನದ ವಿದ್ಯಾರ್ಥಿ ವೇತನದ ಸಹಾಯದೊಂದಿಗೆ ಭಾರತದಲ್ಲಿ ಪದವಿ ವ್ಯಾಸಂಗ ಮಾಡಿದ್ದ ಎಂಬ ಕುತೂಹಲದ ವಿಚಾರವೊಂದನ್ನು ಅಮೆರಿಕ “ವಾಲ್‌ಸ್ಟ್ರೀಟ್ ಜರ್ನಲ್’ ಪ್ರಕಟಿಸಿದೆ.
ವರ್ಷಗಳ ಹಿಂದೆ, ಈ ವ್ಯಕ್ತಿ ಕಂದಹಾರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ. ಈತ ಸೈದ್ಧಾಂತಿಕವಾಗಿ ತಾಲಿಬಾನ್ ಪರವಾಗಿದ್ದ. ಜೊತೆಗೆ, ಗೌಪ್ಯವಾಗಿ ತಾಲಿಬಾನ್ ಸಂಘಟನೆಯ ಸಕ್ರಿಯ ಸದಸ್ಯನೂ ಆಗಿದ್ದ. ಈತನನ್ನು ಅಫ್ಘಾನಿಸ್ತಾನ ಸರ್ಕಾರ ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಕಳುಹಿಸಿತ್ತು.
ಇದನ್ನೂ ಓದಿ:ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ
ಉತ್ತರ ಪ್ರದೇಶದ ಅಲೀಗಡ ವಿಶ್ವವಿದ್ಯಾಲಯದಲ್ಲಿ ಈತ ಮಾನವ ಹಕ್ಕುಗಳ ವಿಷಯದಲ್ಲಿ ಪದವಿ ಪಡೆದಿದ್ದ ಎಂದು ಹೇಳಲಾಗಿದೆ. ಅಲ್ಲದೆ, ಅಫ್ಘಾನಿಸ್ತಾನಕ್ಕೆ ಹಿಂದಿರುಗಿದ ನಂತರ ಈತ ಶೆರಿಯಾ ಕಾನೂನು ಅಧ್ಯಯನ ಮಾಡಿ, ತಾನೂ ಉಗ್ರವಾದಿಯಾಗಲು ಹಂಬಲಿಸಿದ್ದ. ಅದಕ್ಕಾಗಿ ತಾಲಿಬಾನಿಗಳ ಒಪ್ಪಿಗೆಗೂ ಮನವಿ ಸಲ್ಲಿಸಿದ್ದ. ಆದರೆ, ಉಗ್ರರು ಈತನು ವಿಶ್ವವಿದ್ಯಾಲಯದಲ್ಲೇ ಇದ್ದುಕೊಂಡು ಅಫ್ಘನ್ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಸೂಚಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.