Advertisement

ಇಂಗ್ಲೆಂಡ್‌ ವೇಗಿ ಮಿಲ್ಸ್‌ಗೆ 12 ಕೋಟಿ: ಕೆವಿನ್‌ ಅಸಮಾಧಾನ!

12:58 PM Feb 22, 2017 | |

ಲಂಡನ್‌: ಇಂಗ್ಲೆಂಡ್‌ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಕರೆಸಿಕೊಂಡಿರುವ ಕೆವಿನ್‌ ಪೀಟರ್ಸನ್‌ ಈ ಬಾರಿ ಐಪಿಎಲ್‌ನಲ್ಲಿ ಹರಿದಿರುವ ಮೊತ್ತ ಕಂಡು ದಂಗಾಗಿದ್ದಾರೆ.

Advertisement

ತಮ್ಮದೇ ದೇಶದ ಟಿ20ಯಲ್ಲಿ ಮಾತ್ರ ಆಡುವ ವೇಗದ ಬೌಲರ್‌ ಟೈಮಲ್‌ ಮಿಲ್ಸ್‌ಗೆ 12 ಕೋಟಿ ರೂ. ಸಿಕ್ಕಿದ್ದನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಇದು ಟೆಸ್ಟ್‌ ಕ್ರಿಕೆಟಿಗರ ಮುಖಕ್ಕೇ ಹೊಡೆದಂತಾಗಿದೆ ಎಂದು ಟ್ವೀಟರ್‌ನಲ್ಲಿ ವರ್ಣಿಸಿದ್ದಾರೆ. ತಮ್ಮ ಹೇಳಿಕೆಯ ದ್ವಂದ್ವಾರ್ಥವನ್ನು ಅರಿತ ಅವರು ತಕ್ಷಣವೇ ಅದಕ್ಕೆ ವಿವರಣೆಯನ್ನೂ ನೀಡಿದ್ದಾರೆ. ಬರೀ ಟಿ20 ಆಟಗಾರನಾಗಿರುವ ಮಿಲ್ಸ್‌ಗೆ ಸಿಕ್ಕಿರುವ ಈ ಬೃಹತ್‌ ಮೊತ್ತ ಟೆಸ್ಟ್‌ ಕ್ರಿಕೆಟ್‌ ಕುಸಿಯುತ್ತಿರುವ ಸಂಕೇತ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next