2-3 ನಿಮಿಷಗಳ ಮಸಾಜ್ ಅನಂತರ ನನ್ನನ್ನು ತಬ್ಬಿಕೊಳ್ಳಲು, ಮುತ್ತಿಕ್ಕಲು ಯತ್ನಿಸಿದರು. ಆಗ ನಾನು ಪ್ರತಿಭಟಿಸಿದಾಗ ಈ ವಿಚಾರ ಹೊರಗೆ ತಿಳಿಸಿದರೆ ಸಿನಿಮಾ ಅವಕಾಶ ಕೈತಪ್ಪಲಿದೆ ಎಂದು ಎಚ್ಚರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
Advertisement
ನಿರಾಕರಣೆ: ದೂರು ದಾಖಲಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಘಾಯ್, ನಾನು “ಮಿ ಟೂ’ ಅಭಿಯಾನ ಹಾಗೂ ಮಹಿಳಾ ಸಬಲೀಕರಣ ಬೆಂಬಲಿಸುತ್ತೇನೆ. ಆದರೆ, “ಮಿ ಟೂ’ ಅಭಿಯಾನ ದುರ್ಬಳಕೆಯಾಗುತ್ತಿದೆ. ಕೆಲವರು ನನ್ನ ಖ್ಯಾತಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆಂದು ದೂರಿದ್ದಾರೆ.
ಶಾಸ್ತ್ರೀಯ ಸಂಗೀತ ಲೋಕದಲ್ಲೂ ಮಹಿಳೆಯರ ಮೇಲೆ ಶೋಷಣೆಗಳು ನಡೆಯುತ್ತಿರುವುದರ ವಿರುದ್ಧ ಇಡೀ ಸಮಾಜವೇ ಸಿಡಿದೇಳಬೇಕು ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಇಂಥ ದೂರುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ತಮಿಳುನಾಡಿನ 200ಕ್ಕೂ ಹೆಚ್ಚು ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಆಗ್ರಹಿಸಿದ್ದಾರೆ. ಇತ್ತೀಚೆಗೆ, ತಮ್ಮೊಂದಿಗೆ ಶಾಸ್ತ್ರೀಯ ಲೋಕದ ಕೆಲವರು ಅಸಭ್ಯವಾಗಿ ವರ್ತಿಸಿದ್ದಾಗಿ ಗಾಯಕಿ ಚಿನ್ಮಯಿ ಶ್ರೀಪಾದ ಎಂಬವರು ಟ್ವಿಟರ್‌ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸಂಗೀತಗಾರರಿಂದ ಈ ಆಗ್ರಹ ಬಂದಿದೆ.