Advertisement
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾಜದ ಅಭಿವೃದ್ಧಿಯಲ್ಲಿ ಬಂಟರ ಸಂಘಗಳು ಇನ್ನಷ್ಟು ಕೆಲಸ ಮಾಡಬೇಕು. ಸಾಮಾಜಿಕ ಜವಾಬ್ದಾರಿ ಎಂಬುದು ಅತ್ಯಂತ ಶ್ರೇಷ್ಠ ಹಾಗೂ ಕಷ್ಟದ ಕಾರ್ಯವಾದರೂ ಅದನ್ನು ಛಲದಿಂದ ಕೈಗೆತ್ತಿಕೊಂಡು ಮುನ್ನಡೆಯಬೇಕು. ಪ್ರತಿಯೋರ್ವರೂ ಸಮಾಜಕ್ಕೆ ತನ್ನ ಕೈಲಾದ ಕೊಡುಗೆಗಳನ್ನು ಸಲ್ಲಿಸಿದಾಗ ಇಡೀ ದೇಶದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಾಗಿದೆ. ಯಾವುದೇ ಸಂಘಟನೆಯು ಬಲಿಷ್ಠವಾಗಿದ್ದಲ್ಲಿ ಉತ್ತಮ, ಉದಾತ್ತವಾದ ಚಿಂತನೆಗಳು ಸಮ್ಮಿಳಿತಗೊಂಡು ಊರಿನ ಪ್ರಗತಿಗೆ ದಾರಿಮಾಡಿಕೊಡುತ್ತದೆ ಎಂದು ಶ್ರೀ ಮಾತಾನಂದಮಯಿ ನುಡಿದರು.
Related Articles
Advertisement
ಕೆಸರುಗದ್ದೆಯಲ್ಲಿ ನಲಿದಾಡಿ ಸಂಭ್ರಮ: ಸಭಾ ಕಾರ್ಯ ಕ್ರಮದ ಬಳಿಕ ದೊಂದಿ ಉರಿಸುವ ಮೂಲಕ ಕೆಸರಿನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಈ ಮೂಲಕ ನೆರೆದಿದ್ದ ಬಹುತೇಕ ಸ್ಪರ್ಧಾಳುಗಳು ಕೆಸರುಗದ್ದೆಯಲ್ಲಿ ನಲಿದಾಡಿ ಸಂಭ್ರಮಿಸಿದರು. ಅಲ್ಲದೆ ಮನದ ಒತ್ತಡಗಳನ್ನು, ಬದುಕಿನ ಜಂಜಾಟಗಳನ್ನು ಮರೆತು ಎಲ್ಲರೊಂದಿಗೆ ಬೆರೆತು ಖುಷಿಪಟ್ಟರು.
ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಧ್ಯಾಹ್ನ ಆಟಿಯ ವಿಶೇಷ ಭೋಜನ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆ.6ರಂದು ವರ್ಕಾಡಿ ಸುಂಕದಕಟ್ಟೆ ಕೋಳ್ಯೂರು ಆಡಿಟೋರಿಯಂನಲ್ಲಿ ಜರಗುವ ಆಟಿದ ಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.