Advertisement

ಕೆರ್ವಾಶೆ: ಮಡಿವಾಳ ಕಟ್ಟೆಕೆರೆಯಲ್ಲಿ ಮತ್ತೆ ನೀರಿನ ಒರತೆ

01:15 AM May 05, 2019 | Team Udayavani |

ಅಜೆಕಾರು: ಕೆರ್ವಾಶೆ ಗ್ರಾಮದ ಪುರಾತನ ಐತಿಹಾಸಿಕ ಮಡಿವಾಳ ಕಟ್ಟೆಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗಿದ್ದು ಕೆರೆ¿ಚುಲ್ಲಿ ಬೇಸಗೆ ಯಲ್ಲೂ ನೀರಿನ ಒರತೆ ಕಾಣಿಸಿರುವುದು ನಾಗರಿಕರಿಗೆ ಸಂತಸ ಮೂಡಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧ ಯೋಜನೆಯಡಿ ಮಡಿವಾಳ ಕಟ್ಟೆಕೆರೆ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ 4 ಲಕ್ಷ ರೂ ಅನುದಾನ ಮಂಜೂರುಗೊಂಡಿದ್ದು ಉಳಿದ ಮೊತ್ತವನ್ನು ದಾನಿಗಳ ಸಹಕಾರ ದಿಂದ ಸಂಗ್ರಹಿಸಲಾಗಿದೆ.

Advertisement

500 ವರ್ಷ ಹಳೆ ಕೆರೆ
ಸುಮಾರು 500 ವರ್ಷಗಳ ಇತಿಹಾಸ ವಿರುವ ಈ ಮಡಿವಾಳ ಕಟ್ಟೆಕೆರೆಯು ಹಿಂದೆ ಕೆರ್ವಾಶೆ ಗ್ರಾಮದ ನೂರಾರು ಎಕ್ರೆ ಭತ್ತದ ಗ¨ªೆಗಳಿಗೆ ನೀರು ಒದಗಿಸುತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೆ ಹೂಳಿನಿಂದ ತುಂಬಿಹೊಗಿ ನೀರು ಇಲ್ಲದಂತಾಗಿತ್ತು.

ಕಳೆದ 2 ತಿಂಗಳಿನಿಂದ ನಿರಂತರವಾಗಿ ಕೆರೆಯ ಹೂಳೆತ್ತುವ ಕಾಮಗಾರಿ ನಡೆ ಯುತ್ತಿದ್ದು ಸುಮಾರು 1850 ಲೋಡ್‌ ನಷ್ಟು ಹೂಳನ್ನು ತೆಗೆಯಲಾಗಿದೆ. ಕಡು ಬೇಸಗೆಯಲ್ಲಿಯೂ ನೀರಿನ ಒರತೆಯಿದ್ದು ಸುಮಾರು 1 ಫೀಟ್‌ ನಷ್ಟು ನೀರು ನಿಂತಿದೆ.

ಕೆರೆ 7.60 ಎಕ್ರೆಯಷ್ಟು ವಿಸ್ತಾರ ವಾಗಿತ್ತು. ಒತ್ತುವರಿಯಿಂದಾಗಿ ಈಗ ಕೇವಲ ಮೂರರಿಂದ ನಾಲ್ಕು ಎಕ್ರೆ ಯಷ್ಟು ವಿಸ್ತೀರ್ಣದಲ್ಲಿದೆ ಇದರಲ್ಲಿ 1.50 ಎಕ್ರೆಯಷ್ಟು ವಾಪ್ತಿಯ ಹೂಳನ್ನು ತೆಗೆಯ ಲಾಗಿದೆ.

ಕುಡಿಯವ ನೀರಿಗೆ ಉಪಯೋಗ
ಕೆರೆ ಹೂಳೆತ್ತಿದ ಬಳಿಕ ಕೆರ್ವಾಶೆ ಪಂಚಾಯತ್‌ಗೆ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸುಪರ್ದಿಗೆ ಕೆರೆ ಹಸ್ತಾಂತರಗೊಳ್ಳಲಿದೆ. ಮುಂದಿನ ದಿನ ಗಳಲ್ಲಿ ಪಂಚಾಯತ್‌ ವ್ಯಾಪ್ತಿ ಯಲ್ಲಿ ಬೇಸಗೆಯಲ್ಲಿ ಕಂಡು ಬರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಕೆರೆ ಸಹಕಾರಿ ಯಾಗಲಿದೆ. ನೀರಿನ ಒರತೆ ಇರುವು ದರಿಂದ ವಿವಿಧ ಅನುದಾನ ಬಳಸಿ ಕೊಂಡು ಪಂಚಾಯತ್‌ ವ್ಯಾಪ್ತಿಗೆ ನೀರು ಒದಗಿಸಬಹುದು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

Advertisement

ಪರಿಸರ ಸಂರಕ್ಷಣೆ ಉದ್ದೇಶ
ರಾಜ್ಯದ ಪ್ರತೀ ತಾಲೂಕಿನಲ್ಲಿಯೂ ಒಂದು ಕೆರೆ ಅಭಿವೃದ್ಧಿಪಡಿಸುವ ನಮ್ಮೂರು ನಮ್ಮ ಕೆರೆ ಯೋಜನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಡೆ ಹಾಗೂ ಹೇಮವತಿ ವಿ ಹೆಗ್ಡೆ ಅವರು ಹಮ್ಮಿಕೊಂಡಿ¨ªಾರೆ. ಈ ಯೋಜನೆಯಂತೆ ಕೆರ್ವಾಶೆಯ ಮಡಿವಾಳ ಕಟ್ಟೆಕೆರೆಯನ್ನು ಅಭಿವೃದ್ಧಿ ಪಡಿಸಿ ಅಂತರ್ಜಲ ಹೆಚ್ಚಿಸಿ ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಲಾಗಿದೆ.
-ಶಶಿಕಿರಣ…, ಕೃಷಿ ಅಧಿಕಾರಿ, ಗ್ರಾಮಾಭಿವೃದ್ಧಿ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next