ಚಿಕ್ಕೋಡಿ: ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಭಂಡಾರದ ಜಾತ್ರೆ ಎಂದು ಪ್ರಸಿದ್ಧಿ ಪಡೆದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರ ಹಾರಿಸಿ ಭಕ್ತಿಭಾವ ಮೆರೆದರು.
ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಜಾತ್ರೆಗಳು ಕೊರೊನಾ ಅಟ್ಟಹಾಸದಿಂದ ಕಳೆದೆರಡು ವರ್ಷದಲ್ಲಿ ಜಾತ್ರೆಗಳು ನಡೆದಿರಲಿಲ್ಲ, ಪ್ರಸಕ್ತ ವರ್ಷದಲ್ಲಿ ಕೋವಿಡ್ ಅಲೆ ಕಡಿಮೆಯಾಗಿದ್ದರಿಂದ ಪುಣ ಜಾತ್ರೆಗಳಿಗೆ ಕಳೆ ಬಂದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ಜಾತ್ರೆಗಳು ನಡೆದಿವೆ.
ಹಂಡ ಕುದುರಿ, ಪುಂಡ ಅರಣ್ಯಸಿದ್ದಗ ಚಂಗಾಭಲೋ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಭಂಡಾರ ಜಾತ್ರೆ ಎಂದು ಪ್ರಸಿದ್ಧಿ ಪಡೆದ ಕೇರೂರ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರ ಹಾರಿಸುವ ಮೂಲಕ ಭಕ್ತೀಭಾವ ಮೆರೆದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಅದ್ದೂರಿ ತೆರೆ ಕಂಡಿತು. ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟçದ ಭಂಡಾರ ಹಾರಿಸುವ ದೊಡ್ಡ ಜಾತ್ರೆ ಇದಾಗಿದೆ. ಬುಧವಾರ ನಿವ್ವಾಳಕಿ,ದೇವವಾಣಿ ಮದ್ಯಾಹ್ನ ಅಭಿಷೇಕ ಕಾರ್ಯಕ್ರಮ ಮತ್ತು ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಂಡಾರದೊಕಳಿಯಲ್ಲಿ ಮಿಂದೆದ್ದಿರುವುದು ವಿಶೇಷವಾಗಿತ್ತು.
ಜಾತ್ರೆ ನಿಮಿತ್ಯವಾಗಿ ವಿವಿಧ ಸ್ಪರ್ಧೆಗಳು ಜನಮನ ಸೆಳೆದವು. ಕರ್ನಾಟಕ ಮತ್ತು ಮಹಾರಾಷ್ಟçದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮೀಸಿ ಶ್ರೀ ಮಲಕಾರಿಸಿದ್ಧ ಶ್ರೀ ಅರಣ್ಯಸಿದ್ದೇಶ್ವರ ದೇವರ ದರ್ಶನ ಪಡೆದುಕೊಂಡು ಪುಣಿತರಾದರು.
ಗ್ರಾಮದ ಹಿರಿಯ ದುರೀಣ ಮಲ್ಲಿಕಾರ್ಜುನ ಪಾಟೀಲ, ವಿಠ್ಠಲ ವಾಳಕೆ, ವಿರೇಂದ್ರ ಪಾಟೀಲ, ಬಾಳಗೌಡ ರೇಂದಾಳೆ, ಸಿದ್ರಾಮ ಗಡದೇ, ಮಲ್ಲಪ್ಪ ಬಾಗಿ, ಬಿ.ಡಿ.ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಅಪ್ಪಾಸಾಹೇಬ ಬ್ಯಾಳಿ, ರವೀಂದ್ರ ಪಾಟೀಲ, ಸಿದ್ದು ನಾವಿ, ಸುರೇಶ ಬಾಡಕರ, ಶಿವಾನಂದ ಪಾಟೀಲ, ಮಂಜುನಾಥ ಪರಗೌಡ ಮುಂತಾದವರು ಜಾತ್ರೆಯ ಯಶಸ್ವಿಗೆ ಸಹಕರಿಸಿದರು.
ವರದಿ- ಮಹಾದೇವ ಪೂಜೇರಿ