Advertisement
ಇದೇ ವೇಳೆ, ಯುವಕನಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ಇಬ್ಬರು ನರ್ಸ್‌ಗಳಿಗೂ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, ಇವರಿಗೂ ಚಿಕಿತ್ಸೆ ಆರಂಭಿಸಲಾಗಿದೆ. ಎರ್ನಾಕುಳಂನ ಮತ್ತೂಬ್ಬ ಯುವಕನನ್ನೂ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಅಲ್ಲದೆ, ಸೋಂಕು ತಗುಲಿದ ಯುವಕನ ಜತೆ ಸಂಪರ್ಕದಲ್ಲಿದ್ದ 311 ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕನು ಎರ್ನಾಕುಲಂ ಜಿಲ್ಲೆಯವನಾಗಿದ್ದು, ಇಡುಕ್ಕಿ ಜಿಲ್ಲೆಯ ತೋಡುಪುಳದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಾಗಿ ಈ ಎರಡು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ನಿಪಾ ಸೋಂಕು ವಿಚಾರ ದೃಢವಾಗು ತ್ತಿದ್ದಂತೆ ಕೇಂದ್ರದ 6 ಮಂದಿ ತಜ್ಞರ ತಂಡವು ಕೇರಳಕ್ಕೆ ಧಾವಿಸಿದೆ. ಜತೆಗೆ, ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವು ಒದಗಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಈ ನಡುವೆ, ಮಂಗಳವಾರ ಮಾತನಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, “ಯಾರೂ ಆತಂಕಕ್ಕೆ ಒಳಗಾಗ ಬೇಡಿ. ನಾವು ಕೇಂದ್ರ ಆರೋಗ್ಯ ಸಚಿವಾಲ ಯದೊಂದಿಗೆ ನಿರಂತರ ಸಂಪರ್ಕದಲ್ಲಿ ದ್ದೇವೆ. ಎಲ್ಲ ಸವಾಲುಗಳನ್ನು ಎದುರಿಸಲೂ ಸನ್ನದ್ಧರಾಗಿದ್ದೇವೆ’ ಎಂದಿದ್ದಾರೆ.