ನವದೆಹಲಿ: ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲಕ್ಕೆ ವಿಶೇಷ ಲೆಕ್ಕಪತ್ರ ಪರಿಶೋಧನೆಯಿಂದ ವಿನಾಯಿತಿ ನೀಡಬೇಕು ಎಂಬ ಆಡಳಿತ ಮಂಡಳಿ ಕೋರಿಕೆಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.
ಗರಿಷ್ಠವೆಂದರೆ ಮೂರು ತಿಂಗಳ ಒಳಗಾಗಿ 25 ವರ್ಷಗಳಿಂದ ಬಾಕಿ ಇರುವ ಲೆಕ್ಕಪತ್ರಗಳ ಪರಿಶೋಧನೆಯನ್ನು ನಿವೃತ್ತ ಸಿಎಜಿ ವಿನೋದ್ ರಾಯ್ ಉಸ್ತುವಾರಿಯಲ್ಲಿ ನಡೆಸಬೇಕು ಎಂದು ನ್ಯಾ.ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ಅವರು 1989-90ನೇ ಸಾಲಿನಿಂದ 2013-14ನೇ ಸಾಲಿನ ವರೆಗೆ ದೇಗುಲದ ಲೆಕ್ಕಪತ್ರಗಳ ಪರಿಶೋಧನೆಗೆ ಶಿಫಾರಸು ಮಾಡಿದ್ದರು.
ಇದನ್ನೂ ಓದಿ:ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!
ಸೆ.17ರಂದು ಆಡಳಿತ ಮಂಡಳಿ ದೈನಂದಿನ ವೆಚ್ಚ ನಿಭಾಯಿಸಲು ಕಷ್ಟವಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೇರಳದ ದೇಗುಲಗಳು ಮುಚ್ಚಿರುವುದರಿಂದ ಹೀಗಾಗಿದೆ ಎಂದು ಆಡಳಿತ ಮಂಡಳಿ ಅರಿಕೆ ಮಾಡಿತ್ತು.