ತಿರುವನಂತಪುರಂ: ಕಳೆದ ವರ್ಷ 17 ಮಂದಿಯನ್ನು ಬಲಿಪಡೆದುಕೊಂಡಿದ್ದ ನಿಪಾಹ್ ವೈರಸ್ ಮತ್ತೆ ಕೇರಳಕ್ಕೆ ವಕ್ಕರಿಸಿಕೊಂಡಿರುವ ಶಂಕೆ ಮೂಡಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾರಣಾಂತಿಕ ನಿಪಾಹ್ ಸೋಂಕು ತಗಲಿರುವ ಶಂಕಿತ ಪ್ರಕರಣವೊಂದು ಪತ್ತೆಯಾಗಿದೆ. 23 ವರ್ಷದ ಯುವಕನೊಬ್ಬನಿಗೆ ಸೋಂಕು ತಗುಲಿರುವ ಲಕ್ಷಣ ಗೋಚರಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎರ್ನಾಕುಲಂ ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ. ಎಂ.ಕೆ. ಕುಟ್ಟಪ್ಪನ್ ತಿಳಿಸಿದ್ದಾರೆ. ರಕ್ತದ ಮಾದರಿಯನ್ನು ಮಣಿಪಾಲ್ ವೈರಾಲಜಿ ಇನ್ಸ್ಟಿrಟ್ಯೂಟ್ ಮತ್ತು ಕೇರಳ ವೈರಾಲಜಿ ಇನ್ಸ್ಟಿಟ್ಯೂಟ್ಗೆ ಕಳುಹಿಸಲಾಗಿದೆ. ವರದಿ ಮಂಗಳವಾರ ಬರಲಿದೆ ಎಂದಿದ್ದಾರೆ.
Advertisement
ಕೇರಳಕ್ಕೆ ಮತ್ತೆ ವಕ್ಕರಿಸಿತೇ ನಿಪಾಹ್?
01:12 AM Jun 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.