Advertisement

ಕೇರಳ: ಐಸಿಸ್‌ ಪರ ವಾಟ್ಸಪ್‌ ಗ್ರೂಪ್‌

10:08 AM May 08, 2017 | Karthik A |

ಕಾಸರಗೋಡು: ಉಗ್ರಗಾಮಿ ಸಂಘಟನೆ ಐಸಿಸ್‌ ಪರ ವಾಟ್ಸಪ್‌ ಗ್ರೂಪ್‌ಗೆ ಯುವಕನೋರ್ವನನ್ನು ಅನುಮತಿಯಿಲ್ಲದೆ ಸೇರಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಈ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಿದ್ದು, ಅದರಂತೆ ಎನ್‌ಐಎ ತಂಡವು ಕಾಸರಗೋಡಿನಲ್ಲಿ ತನಿಖೆ ಕೈಗೊಂಡಿದೆ. ಆಣಂಗೂರು ಸಮೀಪದ ಕೊಲ್ಲಂಪಾಡಿಯ ಯುವಕನ ಒಪ್ಪಿಗೆ ಇಲ್ಲದೆ ಆತನ ಹೆಸರನ್ನು ಐಸಿಸ್‌ ಪರ ವಾಟ್ಸಪ್‌ ಗ್ರೂಪ್‌ಗೆ ಸೇರಿಸಲಾಗಿದೆ.

Advertisement

ಆ ಬಳಿಕ ಆತನ ವಾಟ್ಸಪ್‌ಗೆ ಮೆಸೇಜ್‌-ಟು ಕೇರಳ ಗ್ರೂಪ್‌ನಲ್ಲಿ ನಿಮ್ಮನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಸಂದೇಶ ಬಂದಿತ್ತು. ಕೇರಳದ ವಿವಿಧ ಪ್ರದೇಶಗಳಿಂದಾಗಿ 200ಕ್ಕೂ ಹೆಚ್ಚು ಮಂದಿಯನ್ನು ಇದೇ ಗ್ರೂಪ್‌ಗೆ ಸದಸ್ಯರನ್ನಾಗಿ ಸೇರಿಸಲಾಗಿದೆ. ಅವರಲ್ಲಿ ನೀವೂ ಸೇರಿದ್ದೀರಿ, ನಮ್ಮೊಂದಿಗೆ ಸಹಕರಿಸಿ ಎಂದು ಯುವಕನಿಗೆ ಸಂದೇಶದಲ್ಲಿ ತಿಳಿಸಲಾಗಿತ್ತು. ಆ ಸಂದೇಶ ದೊರಕಿದ ಕೂಡಲೇ ಗ್ರೂಪ್‌ನ ಉದ್ದೇಶವೇನು ಎಂದು ಯುವಕ ಸಂದೇಶದ ಮೂಲಕ ಪ್ರಶ್ನಿಸಿದಾಗ ಅದಕ್ಕೆ ಇಸ್ಲಾಮಿಕ್‌ ಸ್ಟೇಟನ್ನು ಬೆಂಬಲಿಸುವ ಸಂದೇಶ ಎಂದು ಪ್ರತ್ಯುತ್ತರವಾಗಿ ತನಗೆ ಲಭಿಸಿತ್ತೆಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ತನಿಖೆ ನಡೆಸಿದಾಗ ಆ ಸಂದೇಶ ಅಫ್ಘಾನಿಸ್ಥಾನದ ಫೋನ್‌ ನಂಬರ್‌ನಿಂದ ಬಂದಿರುವುದಾಗಿ ತಿಳಿದುಬಂದಿದೆ. ಕೇರಳ ರಾಜ್ಯ ಸ್ಪೆಷಲ್‌ ಬ್ರಾಂಚ್‌ ಪೊಲೀಸರು ಪರಿಶೀಲಿಸಿದ ಅನಂತರ ಎನ್‌ಐಎಗೆ ಮಾಹಿತಿ ನೀಡಲಾಯಿತು. ಅದರಂತೆ ಎನ್‌ಐಎ ಕಾಸರಗೋಡಿನಲ್ಲಿ ತನಿಖೆ ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next