Advertisement

FB ಯಲ್ಲಿ ವರಾನ್ವೇಷಣೆ : ಸೂಕ್ತ ವರಬೇಕೆಂದು ಕೋರಿದ ಕೇರಳದ ಜ್ಯೋತಿ

08:40 AM May 04, 2018 | Karthik A |

ತಿರುವನಂತಪುರ: ಮದುವೆಯಾಗಲು ಬಯಸುವವರು, ತಮಗೆ ಸೂಕ್ತ ವಧು, ವರರ ಅನ್ವೇಷಣೆಗಾಗಿ ಮಧ್ಯವರ್ತಿಗಳ, ಮ್ಯಾಟ್ರಿಮನಿ ಸಂಸ್ಥೆಗಳ ಮೊರೆ ಹೋಗುವುದನ್ನು ನಾವು ಕೇಳಿದ್ದೇವೆ. ಆದರೆ, ಕೇರಳದ ಯುವತಿಯೊಬ್ಬರು, ತಮ್ಮ ಫೇಸ್‌ ಬುಕ್‌ ಪುಟದಲ್ಲೇ ತನಗೆ ಸೂಕ್ತ ವರನನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಫೇಸ್‌ ಬುಕ್‌ ಸಂಸ್ಥಾಪಕ ಮಾರ್ಕ್‌ ಝುಕರ್‌ ಬರ್ಗ್‌ ಅವರಿಗೆ ಫೇಸ್‌ ಬಕ್‌ ಮ್ಯಾಟ್ರಿಮನಿ ತೆರೆಯಲು (ವಧು-ವರರ ಹುಡುಕಾಟ ವೇದಿಕೆ) ಸೌಲಭ್ಯವನ್ನೂ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಆಕೆಯ ಈ ಪ್ರಯತ್ನಕ್ಕೆ ಜನರಿಂದ ಪ್ರೋತ್ಸಾಹವೂ ಸಿಕ್ಕಿದೆ.

Advertisement

ಇವರ ಹೆಸರು ಕೆ.ಜಿ. ಜ್ಯೋತಿ. ವಯಸ್ಸು 28. ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಮಾಡಿರುವ ಇವರು, ಫೇಸ್‌ಬುಕ್‌ನಲ್ಲಿ #FacebookMatrimony ಎಂಬ ಹ್ಯಾಶ್‌ ಟ್ಯಾಗ್‌ನಡಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ‘ನನಗೊಬ್ಬ ಸೂಕ್ತ ವರ ಬೇಕು. ಜಾತಿ, ಜಾತಕಗಳ ಹಂಗು ನನಗಿಲ್ಲ. ನಾನೊಬ್ಬ ಅನಾಥೆ. ನನ್ನ ಅಣ್ಣ  ಮುಂಬಯಿಯಲ್ಲಿ ಕಲಾ ನಿರ್ದೇಶಕನಾಗಿ ದುಡಿಯುತ್ತಿದ್ದರೆ, ತಂಗಿ ಸಿವಿಲ್‌ ಇಂಜಿನಿಯರಿಂಗ್‌ ಓದುತ್ತಿದ್ದಾಳೆ’ ಎಂದು ತಮ್ಮ ಹಿನ್ನೆಲೆಯನ್ನು ಪರಿಚಯಿಸಿಕೊಂಡಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಜ್ಯೋತಿಯವರ ಈ ಮನವಿ 6,118 ಶೇರ್‌ ಆಗಿದ್ದು, ಇವರಿಗೆ ದೇಶದ ಮೂಲೆ ಮೂಲೆಗಳಿಂದ ಆಫ‌ರ್‌ಗಳು ಹರಿದುಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next